STORYMIRROR

Achala B.Henly

Abstract Classics Inspirational

3  

Achala B.Henly

Abstract Classics Inspirational

"ಆಗುವುದೆಲ್ಲ ಒಳ್ಳೆಯದಕ್ಕೆ"

"ಆಗುವುದೆಲ್ಲ ಒಳ್ಳೆಯದಕ್ಕೆ"

1 min
125


ವರ್ಷಾನುಗಟ್ಟಲೆ ಬಟ್ಟೆಗಳನ್ನು ಹೊಲೆಯುತ್ತಲೇ ತನ್ನ ಪುಟ್ಟ ಸಂಸಾರವನ್ನು ಕಷ್ಟಪಟ್ಟು ಮುಂದೆ ತಂದಳು ಆಕೆ. ಗಂಡ ಅಕಾಲ ಮರಣವನ್ನಪ್ಪಿದ ನಂತರ, ತನ್ನ ಇಬ್ಬರು ಗಂಡು ಮಕ್ಕಳೇ ತನಗೆ ಎರಡು ಕಣ್ಣುಗಳಿದ್ದಂತೆ ಎಂದು ತಿಳಿದಿದ್ದಳು ಆಕೆ.



ಅದರಲ್ಲೊಬ್ಬ ಹೆತ್ತ ಮಗನಾದರೆ, ಇನ್ನೊಬ್ಬ ಅನಾಥ ಶಿಶುವಾಗಿ ಸಿಕ್ಕ ಸಾಕು ಮಗ. ಅಂತೂ ಇಬ್ಬರೂ ಮಕ್ಕಳನ್ನು ಓದಿಸಿ ದಡ ಸೇರಿಸಿದೆ ಎಂದುಕೊಳ್ಳುತ್ತಿರುವಾಗಲೇ, ಅವಳ ಹೆತ್ತ ಮಗ ಪರದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡುತ್ತೇನೆಂದು ಹೊರಟು ನಿಂತ. ಒಂದಷ್ಟು ಸಾಲವನ್ನು ತನ್ನ ತಾಯಿಯಿಂದ ತೆಗೆಸಿದ. ಒಂದು ದಿನ ಕಾಣದೂರಿಗೆ ತೆರಳೇಬಿಟ್ಟ..!!



ಮತ್ತಿನ್ನೇನು ತನ್ನ ಕಥೆ ಎಂದುಕೊಳ್ಳುತ್ತಿರುವಾಗಲೇ, ಅವಳ ಇನ್ನೊಬ್ಬ ಮಗ ತಾವಿರುವ ಪುಟ್ಟ ಊರಲ್ಲೇ ಬಟ್ಟೆ ಹೊಲೆಯುವ ಅಂಗಡಿಯನ್ನು ತೆರೆದ. ತಾನು ತನ್ನಮ್ಮನಿಂದ ಶುರುಮಾಡಿದ ಅಂಗಡಿಗೆ, ಲಾಭ ಬಂದಂತೆ ಮತ್ತೂ ಮೂರು ಜನರನ್ನು ಸೇರಿಸಿಕೊಂಡ.



ಹಾಕಿದ ಬಂಡವಾಳ, ವಿನಯೋಗಿಸಿದ ಶಕ್ತಿ ಕೈ ಕೊಡಲಿಲ್ಲ. ದಿನೇ ದಿನೇ ಪ್ರಗತಿಯನ್ನು ಕಾಣುತ್ತಲೇ ಹೋದ. "ಹೆತ್ತ ಮಗ ತನ್ನನ್ನು ವಿಚಾರಿಸದೆ ಇದ್ದರೇನಂತೆ, ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವ ಹಾಗೆ ತಾನು ಸಾಕಿ ಸಲಹಿದ ತನ್ನ ಸಾಕು ಮಗ, ಈಗ ತನ್ನ ಸ್ವಂತ ಮಗನಿಗಿಂತ ಹೆಚ್ಚಾದನಲ್ಲ, ಅಷ್ಟೇ ಸಾಕು ದೇವರೇ" ಎಂದು ದೇವರಿಗೆ ಕೈಮುಗಿದಳು ಆ ಮುಗ್ಧ ತಾಯಿ..!!



Rate this content
Log in

Similar kannada story from Abstract