STORYMIRROR

Ashwini Desai

Drama Romance Classics

4  

Ashwini Desai

Drama Romance Classics

4) ಈ ಜೀವ ನಿನಗಾಗಿ

4) ಈ ಜೀವ ನಿನಗಾಗಿ

5 mins
350

ಸ್ವೀಕೃತಿ ಫ್ರೆಶ್ ಆಗಿ ಬಂದ ಮೇಲೆ ಹಾಸಿಗೆ ಮೇಲೆ ಮಲಗಿ ತನ್ನ ತಂದೆಗೆ ಕರೆ ಮಾಡಿ ಮಾತಾಡಿದಳು. ನಂತರ ಮಲಗಬೇಕು ಎನ್ನುವಷ್ಟರಲ್ಲಿ ತನ್ನ ಹ್ಯಾಂಡ್ಸಮ್ ಕರೆ ಬಂದಿತು. ಕರೆ ಸ್ವೀಕರಿಸಿದವಳು ಮಾತನಾಡುವ ಮುನ್ನವೇ, ಸ್ವೀಟಿ ನಿಂಗೆ ತುಂಬಾ ಕನ್ಫ್ಯೂಷನ್ ಆಗ್ತಾ ಇದೆ ಅಂತ ಗೊತ್ತು. ಮೊದಲು ಅದನ್ನ ಕ್ಲಿಯರ್ ಮಾಡ್ತೀನಿ. ಆಮೇಲೆ ನಿಂಗೆ ಏನಾದ್ರೂ ಡೌಟ್ ಇದ್ರೆ ಕೇಳು ಓಕೆನಾ? ಎಂದು ಕ್ಲಾರಿಟಿ ಕೊಡುವ ದನಿಯಲ್ಲಿ ಸಾಂತ್ವನ್ ಮಾತಾಡಿದ.

ಅವನ ದನಿ ಕೇಳಿ ಒಮ್ಮೆ ನಕ್ಕವಳು, ಓಕೆ ಸರ್. ಅದೇನು ಹೇಳ್ಬೇಕು ಹೇಳಿ. ನಾನು ಕೇಳ್ತೀನಿ ಎಂದು ಶುರು ಮಾಡಿ ಎಂದಳು.

ಅವಳ ಒಪ್ಪಿಗೆ ಸಿಕ್ಕಿದ್ದೇ, ಓಕೆ. ಎಂದು ಮಾತು ಶುರು ಮಾಡಿದ ಸಾಂತ್ವನ್.

ನಂ 1. ನಿಮ್ಮನ್ನ ಪಿಕ್ ಮಾಡಿದ್ದು ಯಾರೋ ಅಪರಿಚಿತ ವ್ಯಕ್ತಿ ಅಲ್ಲ. ತುಂಬಾ ಚೆನ್ನಾಗಿ ಅಲ್ದೇ ಇದ್ರೂ ನಿಂಗೆ ಅವನ ಪರಿಚಯ ಸ್ವಲ್ಪ ಮಾತ್ರ ಆದ್ರೂ ಇದೆ ಅನ್ಕೋತೀನಿ ಎಂದನು.

ಅವನ ಮಾತು ಕೇಳಿ ಗೊಂದಲಕ್ಕೆ ಬಿದ್ದ ಕೃತಿ, ನಂಗೆ ಪರಿಚಯನಾ? ಯಾರು ಹ್ಯಾಂಡ್ಸಮ್? ಹೇಳು ಪ್ಲೀಜ್.. ಪ್ಲೀಸ್..ನಂಗೆ ನೆನಪು ಆಗ್ತಾ ಇಲ್ಲ. ಎಂದು ಗೋಗರೆದಳು.

ಅವಳ ಗೋಗರೆತ ನೋಡಿ ಅವನಿಗೆ ಸ್ವಲ್ಪ ಬೇಸರ ಮೂಡಿತು. ಆದರೂ ಅವನು ಈ ವಿಷಯದಲ್ಲಿ ಅಸಹಾಯಕ. ಸಾರಿ ಡಿಯರ್. ಅವನ ಬಗ್ಗೆ ನಾನು ನಿಂಗೆ ಯಾವುದೇ ಕ್ಲೂ ಕೊಡಬಾರದು. ನೀನೇ ಅವನನ್ನು ನೆನಪು ಮಾಡ್ಕೊಳೋ ತನಕ ಅವನ ಬಗ್ಗೆ ಯಾವುದೇ ಮಾಹಿತಿ ನಿಂಗೆ ನಾನು ಕೊಡಬಾರದು ಅಂತ ಅವ್ನು ನಂಗೆ ಸ್ಟ್ರಿಕ್ಟ್ ಆರ್ಡರ್ ಪಾಸ್ ಮಾಡಿದಾನೆ ಎಂದನು.

ನಂಗೆ ಅವನ ಬಗ್ಗೆ ಏನು ಹೆಚ್ಚಾಗಿ ತಿಳಿದಿಲ್ಲ. ಅವನ ಬಗ್ಗೆ ನೀನೇ ನೆನಪು ಮಾಡ್ಕೋಬೇಕು ಎಂದನು.

ಹ್ಯಾಂಡ್ಸಮ್ ಮಾತು ಕೇಳಿ ಕೃತಿಗೆ ಗೊಂದಲ ಮೂಡಿತು. ಆದರೂ ಏನೊಂದು ನೆನಪಾಗದೆ, ನನ್ ಹತ್ರಾನೆ ಸೀಕ್ರೆಟ್ ಮಾಡ್ತೀಯ ಹ್ಯಾಂಡ್ಸಮ್? ಎಂದು ಬೇಸರದ ದನಿ ಮಾಡಿಕೊಂಡು ಕೇಳಿದಳು.

ಅವಳ ದ್ವನಿಯಲ್ಲಿದ್ದ ಬೇಸರ ಗುರುತಿಸಿದವನಿಗೆ ತುಂಬಾನೇ ಬೇಜಾರಾಗ್ತಾ ಇತ್ತು. ಸಾರಿ ಸ್ವೀಟಿ. ಪ್ಲೀಜ್ ಅರ್ಥ ಮಾಡ್ಕೋ. ಬೇಜಾರ್ ಆಗಬೇಡ. ನಾಳೆ ನಿಂಗೆ ಗೊತ್ತಾಗಿಲ್ಲ ಅಂದ್ರೆ ಅವ್ನೆ ನಿಂಗೆ ಸೆಲ್ಫ್ ಇಂಟ್ರಡ್ಯೂಸ್ ಮಾಡ್ಕೋತಿನಿ ಅಂತ ಹೇಳಿದ್ದಾರೆ. ನಾನು ಪ್ರಾಮಿಸ್ ಮಾಡಿದೀನಿ ಎಂದು ಕ್ಷಮೆ ಕೇಳುವ ದನಿಯಲ್ಲಿ ಹೇಳಿದನು.

ಅವನ ಬೇಸರವನ್ನು ಅವಳು ಸಹಿಸಳು. ಸರಿ ಬಿಡು ಹ್ಯಾಂಡ್ಸಮ್ ತೊಂದರೆ ಇಲ್ಲ. ಬೇಸರ ಮಾಡ್ಕೋಬೇಡ ಎಂದು ಸಮಾಧಾನಿಸಿದಳು.

ಅವಳೆಷ್ಟೇ ಸಮಾಧಾನ ಮಾಡಿದರು, ಅವಳ ಉಸಿರ ಏರಿಳಿತದಲ್ಲೇ ಅವಳ ಭಾವನೆ ಗುರುತಿಸುವವನು ಅವಳ ಬೇಸರ ಅರಿಯನೇ, ಬೇಜಾರ್ ಮಾಡ್ಕೋಬೇಡ ಪುಟ್ಟ ಪ್ಲೀಜ್ ಎಂದು ಮತ್ತೊಮ್ಮೆ ಕ್ಷಮೆ ಕೇಳಿದ.


ಪದೇ ಪದೇ ಅವನು ಕ್ಷಮೆ ಕೇಳುವುದನ್ನು ಅವಳ ಮನ ಸಹಿಸದು. ಅವನ ಕ್ಷಮೆಯನ್ನು ಅವಳೊಪ್ಪದೇ ಅವನೂ ಬಿಡನು. ಅದರ ಅರಿವಿದ್ದವಳು, ಸರಿ ಬಿಡು. ನೆಕ್ಸ್ಟ್ ಹೇಳು ಎಂದಳು.

ಅವಳ ಮಾತು ಕೇಳು ತುಸು ಸಮಾಧಾನಗೊಂಡ ಹ್ಯಾಂಡ್ಸಮ್ ಮಾತು ಮುಂದುವರೆಸಿದ.


ನಂ 2. ಇವಾಗ ನೀವು ಇರೋದು ನಮ್ಮದೇ ಹೊಸ ಫ್ಲಾಟ್ ಅಲ್ಲಿ. ನಾವು ಇನ್ಮೇಲೆ ಹೇಗಿದ್ರೂ ಪದೇ ಪದೇ ಬೆಂಗಳೂರ್ ಹೋಗೋದು ಇದ್ದೇ ಇರುತ್ತೆ. ಸೋ ಪ್ರತೀ ಸಾರಿ ಹೋಟೆಲ್ ಅಲ್ಲಿ ಸ್ಟೇ ಆಗೋಕೆ ಆಗಲ್ಲ. ಅಂಡ್ ಯಾವಾಗ್ಲೂ ಮೆಹ್ತಾ ಅವರೇ ವ್ಯವಸ್ಥೆ ಮಾಡ್ತಾರೆ ಅಂತ ಕಾಯೋಕೆ ಸರಿ ಆಗಲ್ಲ.

ಎಲ್ಲಕ್ಕಿಂತ ಮೇಲಾಗಿ, ಈ ಫ್ಲಾಟ್ ನಮ್ಮ ನೆಕ್ಸ್ಟ್ ಪ್ರೊಜೆಕ್ಟ್ ವರ್ಕ್ ಪ್ಲೇಸ್ ಇಂದ ತುಂಬಾನೇ ನಿಯರ್ ಇದೆ. ಸೋ ನಿಂಗೂ ಹೆಲ್ಪ್ ಆಗುತ್ತೆ. ಹಾಗಾಗಿ ಯಂಗ್ ಬ್ಯುಸಿನೆಸ್ ಐಕಾನ್ ಅವಾರ್ಡ್ ತಗೊಂಡಿದ್ ಖುಷಿಗೆ ನನ್ನ ಬ್ಯೂಟಿಫುಲ್ ಲೇಡಿಗೆ, ನನ್ನ ಕಡೆ ಇಂದ ಈ ಸ್ಮಾಲ್ ಗಿಫ್ಟ್. ಅಂಡ್ ಮೆಹ್ತಾ ಅರೇಂಜ್ ಮಾಡಿರೋ ಫಾರ್ಮ್ ಹೌಸ್ ನಿಂಗೆ ರಿಲಾಕ್ಸ್ ಬೇಕು ಅನ್ನಿಸಿದಾಗ, ವೀಕೆಂಡ್ ನಿನ್ನ ಅಡಾಪ್ಟ್ ಸಿಸ್ಟರ್ ಜೊತೆ ಹೋಗಿ 2 ಡೇಸ್ ಇದ್ದು ರೆಸ್ಟ್ ಮಾಡಿ ಬರಬಹುದು ಎಂದನು.


ದೂರ ಇದ್ದಾಕ್ಷಣ ಜವಾಬ್ದಾರಿ ಇಲ್ಲವೆಂದು ಸುಮ್ಮನೆ ಕಾಲ ಕಳೆಯುವವರ ನಡುವೆ, ಎಲ್ಲೆ ಇದ್ದರೂ ತನ್ನವರ ಕಾಳಜಿ ಮಾಡುವುದನ್ನು ಅರೆ ಕ್ಷಣವೂ ಮರೆಯದ ಸಾಂತ್ವನ್ ಅಂದ್ರೆ ಕೃತಿಗೆ ಅಭಿಮಾನ ಹೆಚ್ಚು.


ನನ್ನೆಲ್ಲಾ ಸಕ್ಸಸ್ಗೆ ಕಾರಣಕರ್ತನೇ ನೀನು ಹ್ಯಾಂಡ್ಸಮ್. ನೀನು ಇಲ್ಲ ಆಂದಿದ್ರೆ ಭೂಮಿ ಮೇಲೆ ಸ್ವೀಕೃತಿ ಅನ್ನೋ ವ್ಯಕ್ತಿ ಇದ್ಲಾ ಅಂತ ಜನ ಯೋಚನೆ ಮಾಡಬೇಕಿತ್ತು. ಅಂಡ್ ಥ್ಯಾಂಕ್ಸ್ ಫಾರ್ ಎವ್ರಿಥಿಂಗ್ ಹ್ಯಾಂಡ್ಸಮ್. ಇಷ್ಟನ್ನ ಬಿಟ್ಟು ಇದಕ್ಕಿಂತ ಹೆಚ್ಚು ನಂಗೆ ಏನನ್ನೂ ಹೇಳೋಕೆ ಆಗಲ್ಲ ಎಂದಳು. ಅದಾಗಲೇ ಅವಳ ಧ್ವನಿ ನಡುಗ್ತಾ ಇತ್ತು.

ಅವಳ ದನಿಯಲ್ಲೇ ಅವಳ ಪರಿಸ್ಥಿತಿ ತಿಳಿದವ, ಟಾಪಿಕ್ ಚೇಂಜ್ ಮಾಡೋಕೆ, ಸ್ವೀಟಿ ನಿನ್ ಅಡಾಪ್ಟ್ ಸಿಸ್ಟರ್ ಗೆ ಗಂಡು ನೋಡಿ ಮದ್ವೆ ಮಾಡ್ಬೇಕು. ಇಲ್ಲ ಅಂದ್ರೆ ಅವಳ ಕೋಪ ತಾಪಕ್ಕೆ ಇನ್ನು ಅದೆಷ್ಟು ಜನ ಬಲಿ ಆಗ್ತಾರೋ ಎಂದು ನೀತಾ ಬಗ್ಗೆ ತಮಾಷೆ ಮಾಡಿ ನಕ್ಕನು....


ಅವನ ಮಾತು ಕೇಳಿ ಅವಳು ಸಹ ಮೆಲು ನಕ್ಕಳು. ಅಷ್ಟು ಸಾಕಿತ್ತು ಅವನಿಗೆ.

ಸ್ವೀಟಿ ನಾಳೆ ಬೆಳಗ್ಗೆ ಶಾರ್ಪ್ 9 ಗೆ ರೆಡಿ ಆಗಿ. ಇವತ್ತು ಬಂದಿದ್ ವ್ಯಕ್ತಿ ನಾಳೆ ಮಾರ್ನಿಂಗ್ 8.30 ಗೆ ನಿಮ್ ಫ್ಲಾಟ್ ಹತ್ರ ಇರ್ತಾನೆ. ನಾಳೆ ನಿಮ್ಮನ್ನ ಅವನೇ ಬೆಂಗಳೂರ್ ಸುತ್ತೋಕೆ ಕರ್ಕೊಂಡು ಹೋಗ್ತಾನೆ ಎಂದು ನಾಳೆಯ ಅವಳ ಕಾರ್ಯಕ್ರಮಗಳ ಶೇಡ್ಯೂಲ್ ಒಪ್ಪಿಸಿದನು.


ನಂಗೆ ಪಿಎ ಆಗಿ ಬಿಟ್ಯಾ ಇದ್ದಾಳೆ ಹ್ಯಾಂಡ್ಸಮ್. ನಂಗೊತ್ತು ಇದೆಲ್ಲ ನೀನು ನಿನ್ನ ಖುಷಿಗೆ ಮಾಡ್ತೀಯ ಅಂತಾ. ಆದ್ರೆ, ಇದೆಲ್ಲಾ ಬೇಡ ಹೀರೋ. ಅಲ್ಲದೇ, ನಿಂಗೆ ಗೊತ್ತು ನಾನು ನಾಳೆ ಎಲ್ಲಿಗೆ ಹೋಗಬೇಕು ಅಂತಿದೀನಿ ಅಂತ. ಅಲ್ದೇ ಅಲ್ಲಿಗೆ ಹೋಗೋಕು ಮುಂಚೆ ಸ್ವಲ್ಪ ಶಾಪಿಂಗ್ ಕೂಡಾ ಹೋಗ್ಬೇಕು ಎಂದಳು.

ಗೊತ್ತು ಪುಟ್ಟ. ಯು don't ವರಿ. ಅವ್ನು ನಿನ್ನ ಯಾವುದೇ ಪ್ರೈವಸಿಗೆ ಅಡ್ಡ ಬರಲ್ಲ. ಅಲ್ಲದೇ ನಿನ್ನ ಫ್ಲಾಟ್ ಅಲ್ಲಿ ಇರೋ ಗೆಸ್ಟ್ ರೂಮ್ ಅಲ್ಲಿ ನಾಳೆ ನೀನು ಹೋಗೋ ತಯಾರಿ ಎಲ್ಲಾ ಆಗಿದೆ. ಒಮ್ಮೆ ಚೆಕ್ ಮಾಡು. ಇನ್ನು ಏನಾದ್ರೂ ಬೇಕಿದ್ರೆ ಒಂದು ಮಾತು ಹೇಳು ಸಾಕು.

ಅಂಡ್ ಒನ್ ಮೋರ್ ಥಿಂಗ್, ಯಾವುದೇ ಕಾರಣಕ್ಕೂ ನಾಳೆ ನೀನು ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ನಾನು ಕಾಲ್ ಮಾಡಿದಾಗ ಪಿಕ್ ಮಾಡ್ಬೇಕು. ನಾಳೆಯ ನಿನ್ನ ಪರಿಸ್ಥಿತಿ ನಾನು ಊಹೆ ಮಾಡಬಲ್ಲೆ. ನೀನು ನೊಂದುಕೊಳ್ಳೋದು ನನ್ನಿಂದ ನೋಡೋಕೆ ಅಗಲ್ವೋ. ಬೇಡ ಅಂದ್ರೆ ನಿಂಗೆ ಬೇಸರ ಆಗುತ್ತೆ ಅಂತ ಹೂ ಅಂದಿದೀನಿ. ಹಾಗೆ ಆ ನಿನ್ನ ಸಿಸ್ಟರ್ನು ಕರ್ಕೊಂಡ್ ಹೋಗು. ಅವಳನ್ನ ನಿನ್ ಜೊತೆಗೆ ಇರೋಕೆ ಹೇಳಿದೀನಿ ಎಂದನು.


ಪದೇ ಪದೇ ಅವಳೆಷ್ಟೇ ಬೇಡ ಎಂದರು ಬಿಡದೇ ಅವಳನ್ನು ಕಾಳಜಿ ಮಾಡುವ ಅವನ ಪರಿಗೆ ಅವಳ ಹೃದಯ ತುಂಬಿ ಬಂದಿತ್ತು. ಹ್ಯಾಂಡ್ಸಮ್....ಎಂದು ಕರೆದಳು. ಅದಾಗಲೇ ಅವಳ ಧ್ವನಿ ಗದ್ಗದಿತವಾಗಿತ್ತು.


ಅವಳ ಉಸಿರಾಟದಲ್ಲಿಯೆ ಅವಳ ಮನದ ಭಾವ ಅರೆಯುವವ, ಇನ್ನು ಅವಳ ದ್ವನಿ ಕೇಳಿ ಅರಿಯನೇ

ಅವನಿಗೂ ಅವಳ ನೋವು ಕಂಡು ಬೇಸರವಾಗಿತ್ತು. ತನ್ನೆದೆಗೆ ಅವಳನ್ನು ಅಪ್ಪಿ ರಮಿಸುವ ಆಸೆಯಾಗಿತ್ತು. ಆದರೆ ಆದಾಗದು ಎಂಬ ಅರಿವು ಅವನಿಗಿತ್ತು. ನೋಡು ಸ್ವೀಟಿ ನೀನು ಎನ್ ಹೇಳೋಕೆ ಟ್ರೈ ಮಾಡ್ತಾ ಇದೀಯ ಅಂತ ನಂಗೆ ಗೊತ್ತು. ಇದು ನನ್ನ ಕರ್ತವ್ಯ ಕಣೊ.

ನಿನ್ನ ಖುಷಿಗೆ ನಾನು ಏನು ಬೇಕಾದ್ರು ಮಾಡೋಕು ಸಿದ್ದ ಇದೀನಿ. ನನ್ನ ಏಂಜಲ್ ನೀನು. ನೀನು ಯಾವಾಗಲೂ ಸಂತೋಷವಾಗಿರಬೇಕು. ಅದೊಂದೇ ನಾನು ಬಯಸೋದು. ನಿನ್ನ ಕಣ್ಣಲ್ಲಿ ಹನಿ ನೀರಾಡಿದರು ನಾನು ಅದನ್ನ ಸಹಿಸುವುದಿಲ್ಲ ಎಂದು ಹೇಳಿದನು.

ಅವನ ಸಮಾಧಾನದ ನುಡಿಗೆ ಸ್ವಲ್ಪ ಚೇತರಿಕೊಂಡವಳು Sure ಹ್ಯಾಂಡ್ಸಮ್,. ನಾಳೆ ನಾನು ಅಳಲ್ಲ ಎಂದಳು.


ತಕ್ಷಣ ಚಿಕ್ಕ ಮಕ್ಕಳಂತೆ, ಪ್ರಾಮಿಸ್? ಎಂದು ಕೇಳಿದ.


ಅವನ ವರಸೆಗೆ ನಕ್ಕವಳು, ಗಾಡ್ ಪ್ರಾಮಿಸ್ ಎಂದಳು.


ಈಗ ಅವನ ಮನಸ್ಸಿಗೆ ಸಮಾಧಾನ ಆಗಿತ್ತು. That's ಲೈಕ್ ಮೈ ಏಂಜಲ್ ಎಂದು ಸಂಭ್ರಮಿಸಿದ.

ಮತ್ತೇನೋ ನೆನಪು ಮಾಡಿಕೊಂಡವನು, ಸ್ವೀಟಿ ಹಾಗೆ ಇನ್ನೊಂದು ವಿಷಯ, ನಾಳೆ ಇಂದ ನಿಮ್ಗೆ ಮನೇಲಿ ಒಬ್ರು ಫ್ರೆಂಡ್ ಜಾಯಿನ್ ಆಗ್ತಾರೆ. ಹೆಸರು ಜಾನಕಮ್ಮ. ವಯಸ್ಸು ಅಂದಾಜು 45 ಇರಬಹುದು. ಮನೆಯ ಎಲ್ಲಾ ಕೆಲಸ, ಅಡಿಗೆ ಮಾಡೋದು, ನಿನ್ನ ಬೇಕು ಬೇಡಗಳನ್ನು ನೋಡಿಕೊಳ್ಳುವುದು ಅವರ ಕೆಲಸ.

ನಿಂಗೆ ಏನೇ ಬೇಕಿದ್ರೂ ಸಂಕೋಚ ಪಡಬೇಡ. ಒಳ್ಳೆ ಹೆಂಗಸು. ಮಿತು ಭಾಷಿ. ನಿಂಗೆ ಸೆಟ್ ಆಗ್ತಾರೆ. ಆ ನಿನ್ ಅಡಾಪ್ಟ್ ಸಿಸ್ಟರ್ ಗೆ ಅವರ ತಲೆ ತಿನ್ನಬೇಡ ಅಂತ ಹೇಳು. ಮಗಳ ಮನೆಗೆ ಹೋಗಿದ್ರು. ಹಾಗಾಗಿ ನಾಳೆ ಇಂದ ಬರ್ತಾರೆ ಎಂದನು. ಅವನ ಅಪರಿಮಿತ ಕಾಳಜಿಗೆ ಅವಳ ಹೃದಯ ಕರಗಿತು.


ಓಕೆ ಸರ್. ನೀವು ಇಲ್ಲಿಯ ನನ್ನ ಚಿಂತೆ ಬಿಟ್ಟು ಅಲ್ಲಿಯ ಕೆಲಸ ಮಾಡಿ. ನಿಮ್ ಮನಸ್ಸು ಪೂರಾ ಬೆಂಗಳೂರ್ ರೌಂಡ್ ಹೊಡೀತಾ ಇದ್ರೆ ಮುಂಬೈ ಆಫೀಸ್ ಗತಿ ಏನು. ಆ ಕಂಪನಿ ಸಿಇಓ ಆಗಿ ನಿಮ್ಮ ಕಾರ್ಯ ವೈಖರಿಯಲ್ಲಿ ಏನಾದರೂ ಚ್ಯುತಿ ಬಂದಿದ್ದೇ ಆದರೆ, ನಿಮ್ಮನ್ನು ನಿಮ್ಮ ಸ್ಥಾನದಿಂದ ಪರಾಭವಗೋಳಿಸಲಾಗುವುದು ಎಂದು ಸ್ಟ್ರಿಕ್ಟ್ ದನಿಯಲ್ಲಿ ಹೇಳಿದಳು.


ಅವಳ ಒರಿಜಿನಾಲಿಟಿ ಸ್ವಭಾವಕ್ಕೆ ಹಿಂತಿರುಗಿದ್ದು ನೋಡಿ, ಆಕಾಶಕ್ಕೆ ಕೈಚಾಚುವಷ್ಟು ಖುಷಿ ಪಟ್ಟವ, ಅಪ್ಪಣೆ ಮಹಾರಾಣಿ. ನಿಮ್ಮ ಆಜ್ಞೆಯನ್ನು ಈ ನಿಮ್ಮ ಅಜ್ಞಾಪಾಲಕ ಶಿರಸಾವಹಿಸಿ ಪಾಲಿಸುವನು ಎಂದು ನಾಟಕೀಯವಾಗಿ ನುಡಿದನು.


ಇಬ್ಬರಲ್ಲೂ ಒಂದೇ ಕ್ಷಣಕ್ಕೆ ದೊಡ್ಡ ನಗು. ಅವಳ ನಗುವೇ ಅವನಿಗೆ ಬದುಕಲು ಸಂಜೀವಿನಿ.


ಲವ್ ಯು ಸ್ವೀಟಿ. ಗುಡ್ ನೈಟ್ ಬೈ. ನಾಳೆ ಮಾರ್ನಿಂಗ್ ಕಾಲ್ ಮಾಡ್ತೀನಿ ಎಂದು ಕರೆ ತುಂಡರಿಸಿದನು.

ಬೈ ಹ್ಯಾಂಡ್ಸಮ್ ಎಂದು ಹೇಳಿ ಕೃತಿ ಕೂಡಾ ನಿದಿರೆಗೆ ಜಾರಿದಳು.

*************************


ಬೆಳಗ್ಗೆ ಎದ್ದು ರೆಡಿ ಆಗಿ ಗೆಸ್ಟ್ ರೂಮ್ ಅಲ್ಲಿಯ ಸಾಮಗ್ರಿಗಳನ್ನು ನೋಡಿ, ಮನದಲ್ಲೇ ಸಾಂತ್ವನ್ನ ಕಾರ್ಯ ವೈಖರಿ, ತಾನಿಲ್ಲದೇ ಇದ್ದರೂ ಇದ್ದಲ್ಲಿಂದಾನೆ ತನಗಾಗಿ ಅವನು ವಹಿಸುವ ಮುತುವರ್ಜಿ, ತೋರುವ ಕಾಳಜಿ ನೆನೆದು ಕೃತಿಗೆ ಮನ ತುಂಬಿ ಬಂತು.

ಅಂತವನಿಗೆ ನನ್ನಿಂದ ಮೋಸ ಆಗ್ತಾ ಇದೆ ಅಂತ ನೆನೆದು ಅವಳ ಕಣ್ಣು ತುಂಬಿ ಬಂತು. ಆದರೆ ನೆನ್ನೆ ರಾತ್ರಿ ಅವನಿಗೆ ಕೊಟ್ಟ ಮಾತು ನೆನಪಾಗಿ ಕಣ್ಣ ಬಿಂದು ಕಣ್ಣಲ್ಲೇ ಇಂಗಿಸಿದಳು. ತನಗಾಗಿ ಎಲ್ಲವನ್ನೂ ತಾನು ಕೇಳುವ ಮೊದಲೇ ಮಾಡುವವನಿಗಾಗಿ ಅವನಿಗೆ ಮಾತು ಕೊಟ್ಟಂತೆ ಕಣ್ಣೀರು ಹಾಕಬಾರದು ಎಂದು ತೀರ್ಮಾನಿಸಿದಳು.

ಇವರು ಹೊರಡುವ ವೇಳೆಗೆ ಮನೆಗೆ ಬಂದ ಸಂಕಲ್ಪ ತನ್ನ ಜೊತೆ ಕರೆತಂದಿದ್ದ ಜಾನಕಮ್ಮನನ್ನು. ಕೃತಿಗೆ ಪರಿಚಯಿಸಿದನು. ನಂತರ ಗೆಸ್ಟ್ ರೂಮ್ ಹೊಕ್ಕು ಅಲ್ಲಿದ್ದ ಎಲ್ಲವನ್ನೂ ಕಾರ್ ಅಲ್ಲಿ ಇರಿಸಿ ಬಂದು, ಮ್ಯಾಮ್ ಹೊರಡೋಣ ಎಂದು ಅವಳ ಒಪ್ಪಿಗೆಗೆ ಕಾದ.


ಅವನ ಮುಖ ಪರಿಚಯ ನೆನಪು ಆಗದೇ ಇದ್ದರೂ ನೆನ್ನೆ ಸಾಂತ್ವನ ಹೇಳಿದ್ದು ನೆನೆದು ಒಂದು ಪರಿಚಯದ ನಗು ವಿನಿಮಯ ಮಾಡಿದಳು. ಅವಳ ನಗುವಿಗೆ ಪ್ರತಿ ನಕ್ಕವನ ಚಿತ್ತವೋ ಬಾಯಿ ಬಡುಕಿ ನೀತಾ ಮೇಲೆ ಕೇಂದ್ರೀಕೃತವಾಗಿತ್ತು. ಎಲ್ಲರ ಸವಾರಿ ಹೊರಟಿತು. ಕೃತಿ ಮನದಲ್ಲಿ ನೆನಪುಗಳ ತರಂಗ ಶುರುವಾಗಿತ್ತು. ತನ್ನ ಬದುಕಿನ ಹಳೆ ಪುಟ ತೆರೆದು ಓದುವ ಸಾಹಸಕ್ಕೆ ಕ್ಸಿ ಹಾಕಿದ್ದಳು ಕೃತಿ.

*************************


ಕೃತಿ ಹೊರಟಿದ್ದು ಎಲ್ಲಿಗೆ? ಸಂಕಲ್ಪ ಬಗ್ಗೆ ಕೃತಿಗೆ ತಿಳಿಯುತ್ತಾ? ಕೃತಿ ಬದುಕಿನ ಹಳೆ ಪುಟದಲ್ಲಿ ಏನಿದೆ? ಕೃತಿಯಿಂದ ಸಾಂತ್ವನ್ಗೆ ಆಗುತ್ತಿರುವ ಮೋಸ ಯಾವುದು? ಸಾಂತ್ವನ ಪ್ರಕಾರ ಆ ಜಾಗಕ್ಕೆ ಹೋದರೆ ಕೃತಿ ಅಳ್ತಾಳೆ ಯಾಕೆ??


ಮುಂದುವರೆಯುವುದು.....

ಕತೆಯ ಬಗ್ಗೆ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೇ. ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆಗಳು ನಮಗೆ ಕತೆ ಬರೆಯಲು ಪ್ರೋತ್ಸಾಹ.... ಒಂದೆರೆಡು ನಿಮಿಷದ ನಿಮ್ಮ ಸಮಯದ ವಿನಿಯೋಗ ನಮಗೆ ಮುಂದಿನ ಸ್ವಾರಸ್ಯ ಕತೆ ಬರೆಯಲು ಸ್ಪೂರ್ತಿ.....🙏🙏\

​ಧನ್ಯವಾದಗಳು......



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Drama