STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಯುಗಾದಿ

ಯುಗಾದಿ

1 min
127

ಶಿಶಿರ‌ ಕ‌ಳೆದು

ಚೈತ್ರ‌ ಹ‌ರಿದು

ಹ‌ಚ್ಚ‌ ಹ‌ಸಿರು

ತೊಟ್ಟಿಕೊ0ಡು

ಮ‌ತ್ತೆ ಬ0ತು

ಹೊಸ‌ ಯುಗಾದಿ


ಅದೇ ಸೂರ್ಯ‌

ಅದೇ ಬೆಳ‌ಕು

ಬೆಸೆತುಕೊ0ಡು

ಹೊಸಾ ತ‌ಳುಕು

ಮ‌ರ‌ಳಿ ಬ0ತು

ಹೊಸ‌ ಯುಗಾದಿ


ಕ‌ಹಿ ನೆನ‌ಪುಗ‌ಳ‌

ಮ‌ಸುಕು ಕ‌ರ‌ಗಿ

ಹೊಸ‌ ಕ‌ನ‌ಸುಗ‌ಳ‌

ನ‌ಸುಕು ಮೂಡಿ

ಮ‌ತ್ತೆ ಬ‌0ತು

ಹೊಸ‌ ಯುಗಾದಿ


ಹ‌ಳೆಯ‌ ಕ‌ಣ್ಣು

ಹೊಸ‌ತು ದ್ಱ‌ಷ್ಟಿ

ಹ‌ಳೆಯ‌ ಬೇರು

ಹೊಸ‌ತು ಚಿಗುರು

ಬೆಸೆದು  ತ0ತು

ಹೊಸ‌ ಯುಗಾದಿ


ಬೇವಿನ ಕಹಿ

ಬೆಲ್ಲದ ಸಿಹಿ

ಬೇವು ಬೆಲ್ಲ

ಬೆಸೆತು ಕೊಂಡು

ಮತ್ತೆ ಬಂತು

ಹೊಸ ಯುಗಾದಿ


ಶಾರ್ವರೀ ಉರುಳಿ

ಪ್ಲವ ವು ಉದಿಸಿ

ನವಪಲ್ಲವಗಳು

ಎಲ್ಲೆಲ್ಲೂ ಅರಳಿ

ಮತ್ತೆ ಬಂತು

ಹೊಸ ಯುಗಾದಿ


Rate this content
Log in

Similar kannada poem from Abstract