ಯಾವುದೇ ಋತು
ಯಾವುದೇ ಋತು
ಋತುಗಳ ರಾಜ ವಸಂತ ಬಂದ
ಋತುಗಳ ರಾಜ ವಸಂತನ ಆಗಮನ
ವಸಂತಋತುವಿನ ಬೇರೆ ಋತುವಿನ ನರ್ಗಮನ
ವಸಂತನ ಆಗಮನಕ್ಕೆ ಪ್ರಕೃತಿಯು ಮೈಯೊಡ್ಡಿದೆ
ತರುಲತೆಗಳ ಚಿಗುರುವಿಕೆಗೆ ಹೂಗಳು ಕಂಪನ್ನು ಬೀರುತಿದೆ.
ಋತುಗಳ ರಾಜ ವಸಂತ ಬಂದ
ಹೂಗಳ ಪರಿಮಳ ತಂಗಾಳಿ ಹರಿದಾಡುತ್ತಿದೆ
ಹೂಗಳ ಮೇಲೆ ದುಂಬಿಯ ಸಂಗೀತ ಮೊದಲಾಯಿತು
ಮರಗಳ ಮೇಲೆ ಕೋಗಿಲೆಯು ಆಶ್ರಯಿಸುತ್ತ
ಮರಗಳ ಮೇಲೆ ಚಿಗುರಿದ ಮಾವಿನ ಎಲೆಗಳನ್ನು ತಿಂದು ಹಾಡುತಿದೆ.
ಋತುಗಳ ರಾಜ ವಸಂತ ಬಂದ
ಮೃದು ವಸಂತದ ಮುದ್ದು ಮೊಗ್ಗಿನ ಕಣ್ಣ
ತೆರೆದು ಅರಳಾಗುವ ಸಮಯ
ಬಾನಿನಲ್ಲಿ ಎಳೆಬಿಸಿಲು ತನ್ನ ನಗುವಿನ ಮೂಲಕ ಚಿಗುರಿತು ತೋಟ
ಬಗಬಗೆ ಹೂಗಳು ತೋಟದಲ್ಲಿ ಕಾಯುತಿತ್ತು ವಸಂತ ಆಗಮನಕ್ಕೆ.
