ತಾಳ್ಮೆ
ತಾಳ್ಮೆ
ಬೇಕು ಬೇಕು ಬೇಕು ತಾಳ್ಮೆ
ಮಾನವನ ಬದುಕಿಗೆ ಬೇಕು ತಾಳ್ಮೆ
ತಾಳ್ಮೆ ಇಲ್ಲದ ಜೀವನ ನಶ್ವರ
ತಾಳ್ಮೆ ಗಳಿಸಲು ಭಕ್ತಿಯ ಒಲಿಸಿಕೊಳ್ಳಬೇಕು ಈಶ್ವರನಲ್ಲಿ
ಪ್ರಕೃತಿಯ ಚರಾಚರ ವಸ್ತುಗಳು ಉದಯಿಸುವುದು ತಾಳ್ಮೆಯ ಮಂದಹಾಸದಲ್ಲಿ
ವನಸುಮವು ಅರಳುವುದು ಮೌನವಾಗಿ , ಗಾಂಭೀರ್ಯದಿಂದ , ತಾಳ್ಮೆಯಲಿ
ತಾಳ್ಮೆಯೇ ಬದುಕಿನ ಸೌಭಾಗ್ಯ
ತಾಳ್ಮೆಯಿಲ್ಲದ ಬದುಕು ಅವ್ಯವಸ್ಥೆಯ ದೌರ್ಭಾಗ್ಯ
ದೇಶ ದೇಶಗಳ ನಡುವೆ ಸ್ನೇಹ – ಸಂಬಂಧಗಳಿಗೆ ಬೇಕು ತಾಳ್ಮೆ
ದೇಶ ವಿದೇಶಗಳಿಗೆ ಬೇಡವಾದದು ದ್ವೇಷ ಸಂಬಂಧಗಳ ತಾಳ್ಮೆಯೆಂಬ ಸಂಕೋಲೆ
ಮಾನವನ ಹುಟ್ಟು-ಸಾವಿನಲ್ಲೂ ತಾಳ್ಮೆಯು ಪಡೆದಿರುವುದು ತನ್ನ ಅಧಿಪತ್ಯ
ಮಾನವನ ಭಕ್ತಿ-ವಿರಕ್ತಿಯಲ್ಲಿ ತಾಳ್ಮೆಯು ಪಡೆದಿರುವುದು ಪತ್ಯದಲಿ
ನರನ ಜಿಹ್ವೆಯು ನುಡಿಯುವುದು ತಾಳ್ಮೆಯಿಲ್ಲದ ಸ್ವಾರ್ಥದೆಡೆಗೆ
ನರನ ಜಿಹ್ವೆಗೆ ಬೇಕು ತಾಳ್ಮೆಯೆಂಬ ನಿಸ್ವಾರ್ಥದೆಡೆಗೆ
ದೇಶದ ನಾಯಕರು ತಾಳ್ಮೆಯಿಲ್ಲದೆ ಅಧಿಕಾರವನ್ನು ಪಡೆದು ಕಳಂಕವನ್ನು ಹೊತ್ತು ನಡೆಯುತ್ತಿರುವರು
ಅಧಿಕಾರಶಾಹಿ ವರ್ಗದವರು ತಾಳ್ಮೆಯೆಂಬ ಪಾಠವನ್ನು ಕಲಿತು ನಿಷ್ಕಳಂಕವಾಗಿ ನಡೆಸಬೇಕು ಅಧಿಕಾರವನು.
ಮೌನದಲಿ ಅಡಗಿರುವುದು ತಾಳ್ಮೆಯ ಸಂಕೇತ
ದ್ವೇಷದಲಿ ಅಡಗಿರುವುದು ಪ್ರತಿಧ್ವನಿಯ ಸಂಕೇತ.
ಪ್ರೀತಿ , ಪ್ರೇಮದ ಸಹಕಾರ ತಾಳ್ಮೆಯ ಅನಾವರಣ
ಅಶಾಂತಿ, ದ್ವೇಷದ ಅಧಿಪತ್ಯ ತಾಳ್ಮೆಯ ಆವರಣ.
