STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಉದ್ಯಾನವನ

ಉದ್ಯಾನವನ

1 min
146

ಹಸಿರೇ ಉಸಿರಾಗಿರುವ

ಊರ ಉದ್ಯಾನವನ

ಆಬಾಲ ವೃದ್ಢರಿಗಿದು

ನೆಮ್ಮದಿಯ ತಾಣ


ಬೈಗು ಬೆಳಗುಗಳಲ್ಲಿದು

ವಾಯು ವಿಹಾರಕಾಶ್ರಯವು

ಪ್ರೇಮ ನಿವೇದನೆಗೈವ

ಪ್ರೇಮಿಗಳಿಗೋ ! ವಸಂತವನ


ಜಾರುಗುಪ್ಪೆ ಜೋಕಾಲಿಗಳು

ಏಣಿ ಏತಗಳು ತಿರುಗು ಚಕ್ರಗಳು

ಎಳೆಯ ಮಕ್ಕಳಿಗೋ

ಆಟದ ಮೈದಾನವಿದು


ತನ್ನೊಳಗೆ ಹುಗುವವರ

ನೋವುಗಳ ಮರೆಸುತ್ತಾ

ಆನಂದ ಆರೋಗ್ಯಗಳನ್ನೀವ

ಸುಂದರತಾಣವೀ ಉದ್ಯಾನವನ


ಮನುಜರಿಗೆ ಮುದವೀವ

ಮನವನರಳಿಸುವ

ಉದ್ಯಾನವಿರಬೇಕು

ಊರು ಕೇರಿಗಳಲ್ಲಿ



Rate this content
Log in

Similar kannada poem from Abstract