ಉದಯ
ಉದಯ
ಉದಯಿಸದ ಉದಯನಿಗೆ ನನ್ನ ತುಂಬು ಹೃದಯದ ನಮನ
ಕೇಳು ನೀ, ನೋಡಿಲ್ಲ ನಾ ನಿನ್ನಂತಹ ಹೃದಯವಂತನ...
ನಿನ್ನ ಮಾತೇ ನಿನಗೆ ಭೂಷಣ, ನೀನಿಲ್ಲದ ಮನೆ ಭಣ ಭಣ
ದೇವನೆ ಕೊಡು ಎಲ್ಲರ ಮನೆಗೂ ನಿನ್ನಂತಹ ಆಭರಣ
ಅಪರಿಮಿತ ಪ್ರೀತಿ, ಪ್ರೇಮ ತೋರಿದ ನಿನಗೆ
ಬಾಡದಿರಲಿ ಎಂದೆಂದೂ ನಿನ್ನ ಮುಗುಳ್ನಗೆ
ಕೊನೆಗೂ ಸಾವನು ಗೆದ್ದೇ ಬಿಟ್ಟೆ ಉದಯ ಮೆಂಡಿಗೇರಿ
ಅಲಿಯಲಿಲ್ಲ ನಿನ್ನವರು ನಿನಗಾಗಿ ಊರು ಕೇರಿ!!
ಓಂ ಶಾಂತಿ, ಓ ದೇವನೆ ಕೊಡಲಿ ನಿನ್ನ ಆತ್ಮಕೆ ಶಾಂತಿ
ಇದೇ ನಮ್ಮೆಲ್ಲರ ಪ್ರೀತಿಯ ನಲ್ಮೆಯ ಬಯಕೆ, ಓಂ ಶಾಂತಿ!!