ಸ್ವಚ್ಛತೆ
ಸ್ವಚ್ಛತೆ
ಸ್ವಚ್ಛ ಮನಸ್ಸು ಸ್ವಸ್ಥ ಬದುಕು
ಇವೆರಡೂ ಒಬ್ಬ ಜೀವಿಗೆ ಬೇಕಿದೆ.
ಮನೆಯನ್ನಷ್ಟೇ ಸ್ವಚ್ಚವಾಗಿಡದೇ,
ಮನಸ್ಸಿನ ಕೊಳೆಯನ್ನು ತೆಗೆದು ಹಾಕಬೇಕಿದೆ..!
ದೇವನಿಗೆ ಹೂ ಹಾಕದಿದ್ದರೂ ಸೈ,
ಕೈಲಾಗದವರಿಗೆ ಸಹಾಯ ಹಸ್ತ ಚಾಚಿದರೆ,
ತಿಳಿದೋ ತಿಳಿಯದೆಯೋ,
ದೇವನಂತಹ ಮಾನವನಾಗುತ್ತೀಯೆ..!
ಇಲ್ಲವಾದರೆ, ಹೂ ಹಾಕಿಯೂ,
ಜಪ ತಪ ಮಾಡಿಯೂ,
ಕಂಡವರಿಗೆ ನೆರವಾಗದಿದ್ದರೆ
ಖರೆ ನೀನು ದಾನವನಾಗುತ್ತೀಯೆ..!
ಬರಿಯೇ ದೇಹ ಮಲಿನವಾಯಿತೆಂದು
ಜಳಕ ಮಾಡದೇ,
ಅಂತರಂಗದ ಶುದ್ಧಿಗಾಗಿಯೂ ಸಹ
ಪ್ರತಿ ಜೀವಿಯೂ, ಪ್ರತಿ ಕ್ಷಣವೂ
ಪರಿಶುದ್ಧವಾಗಲು ಪ್ರಯತ್ನಿಸಬೇಕಿದೆ..!
