ಸೂರ್ಯೋದಯ
ಸೂರ್ಯೋದಯ
ಕತ್ತಲ ಕಾರ್ಮೋಡ ಕಳೆದು ಸೂರ್ಯ ಉದಯಿಸಿದ ಸುದಿನ
ಈ ದಿನಕ್ಕಾಗಿಯೇ ಕಾದಿತ್ತು ಭಾರತೀಯರ ಮನ
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭದಿನ
ಹೋರಾಡಿದ ಎಲ್ಲರಿಗೂ ಕೋಟಿ ಕೋಟಿ ನಮನ
ಬಿಡಲಿಲ್ಲ ಆ ಮಹಾತ್ಮರು ಸ್ವಾತಂತ್ರ್ಯ ಪಡಿದೇ ತೀರುವೆ ಎಂಬ ಛಲ
ಕೊನೆಗೂ ಭಾರತೀಯರ ಕೆಚ್ಚೆದೆಯ ಹೋರಾಟಕ್ಕೆ ಸಿಕ್ಕಿತು ಫಲ
ದೇಶದಲ್ಲಿನ ಪರಕೀಯರ ಅಡಿಪಾಯ ಬೇರುಸಮೇತ ಕಿತ್ತರು
ವಿಶಾಲ ಭಾರತದೆಲ್ಲೆಡೆ ದೇಶಪ್ರೇಮದ ಬೀಜ ಬಿತ್ತರು
ಭಾರತೀಯರ ಮನೆ ಮನದಲ್ಲೂ ತ್ರಿವರ್ಣ ಪತಾಕೆ ಹಾರಿತು
ಎಲ್ಲೆಲ್ಲೂ ದೇಶಭಕ್ತಿ ಕೂಗಿನ ಜೈಕಾರ ಮೊಳಗಿತು
ಆಂಗ್ಲರ ಆಡಳಿತ ಧೋರಣೆಗೆ ಕೊನೆ ಹಾಡಿತು
ಭಾರತ ದೇಶವು ಬ್ರಿಟಿಷರಿಂದ ಮುಕ್ತಿ ಪಡೆಯಿತು
ಒಂದೇ ತಾಯಿ ಮಕ್ಕಳಂತೆ ಹೋರಾಡಿದ ದೇಶಭಕ್ತರ ಸ್ಮರಿಸೋಣ
ಅವರು ನೀಡಿದ ಸ್ವಾತಂತ್ರ್ಯ ಎಂಬ ಕೊಡುಗೆಯ ಗೌರವಿಸೋಣ
ನಮ್ಮವರಿಗಾಗಿ ಈ ಪುಣ್ಯದಿನ ಅವರ ನೆನೆಯೋಣ
ಅವರು ಕಂಡ ಕನಸ ಭಾರತ ನಾವೆಲ್ಲರೂ ಸೇರಿ ನನಸ್ಸು ಮಾಡೋಣ