ಸೋತ ಅಪ್ಪ-ಗೆದ್ದ ಮಗ
ಸೋತ ಅಪ್ಪ-ಗೆದ್ದ ಮಗ
ಸಾಧನೆಯ
ಕನಸುಗಳ ಹೊತ್ತ
ಹುಡುಗನೊಬ್ಬ
ಬಾರ್ ಒಂದರಲ್ಲಿ
ಲೋಟಗಳನ್ನು
ತೊಳೆಯುತಲಿದ್ದ..I
ಸಂಜೆ ಸಮಯದಿ
ಬರುತ್ತಿದ್ದ ಅಪ್ಪ
ಕುಡಿದು ಹೋಗುತ್ತಿದ್ದ
ಮತ್ತಿನಲ್ಲಿ ಕನಸ
ಕಾಣುತ್ತಿದ್ದ
ಮಗನ ಸಂಬಳ
ಹೆಚ್ಚಾಗಬಹುದೆಂದು I
ಅದೊಂದು ದಿನ
ಬಾರ್ ನ ಓನರ್
ಮಗ ಬಂದ
ಅಪ್ಪನ ಕಿವಿ ಬಳಿ
ಏನೋ ಹೇಳಿದ..I
ಮಾರನೆ ದಿನ
ಕನಸ ಹೊತ್ತ ಹುಡುಗ
ಹೈಸ್ಕೂಲ್ ನಲ್ಲಿದ್ದ I
ಬಾರ್ ಓನರ್ ನ ಮಗ
ಕಾರ್ಮಿಕ ಕಲ್ಯಾಣದ
ಅಧಿಕಾರಿಯಾಗಿದ್ದ I
ಅಪ್ಪ ಸೋತಿದ್ದ
ಮಗ ಗೆದ್ದಿದ್ದ II
