STORYMIRROR

Vijaya Bharathi

Abstract Others

2  

Vijaya Bharathi

Abstract Others

ಸಂತೆ

ಸಂತೆ

1 min
267

ನಮ್ಮೂರ ಸಂತೆಯಲಿ

ನಾನೊಬ್ಬ ಗ್ರಾಹಕ

ವ್ಯಾಪಾರ ಭರದಲ್ಲಿ

ಮರೆತು ನಿಂತೆ ಅಲ್ಲೇ

ಮನೆಗೆ ಹಿಂದಿರುಗದೇ


ಸಾಲು ಸಾಲು ಅಂಗಡಿಗಳು

ಬಣ್ಣ ಬಣ್ಣದ ಬತ್ತಾಸು ಗಳು

ತೂಗಾಡುತಿಹ ಬಲೂನುಗಳು

ಚಾಕಲೇಟ್ ಬಿಸ್ಕೆಟ್ ಗಳು

ಆಸೆಗಣ್ಣಿಂದ ನೋಡುತ್ತಾ ನಿಂತೆ


ತೆಂಗಿನ ಕಾಯಿ ಬಾಳೆಹಣ್ಣು

ಮೆಣಸಿನಕಾಯಿ ಹುಣಸೇಹಣ್ಣು

ಕಾಯಿಪಲ್ಲೆ ಹಣ್ಣುಗಳು

ಕೈ ಬೀಸಿ ಕರೆದವೆನ್ನನು


ನೋಡುತ್ತಾ ನಿಂತು ಬಿಟ್ಟೆ

ಸಂತೆ ವ್ಯಾಪಾರದೊಳು

ಕಾಸುಗಳ ಎಣಿಸುತ

ಚೀಲಗಳ ತುಂಬಿಸುತ

ನಿಂತೆನಲ್ಲಿಯೆ ನಾನು


ಮನೆಯ ಮರೆತು

ಸಂಸಾರ ಸಂತೆಯಲಿ

ಬಾಲ್ಯ ಯೌವನ ವ್ಯಾಪಾರ

ಮುಗಿದೇ ಹೋಯಿತು

ಮತ್ತೆ ಇಣುಕಿತು ವೃದ್ಧಾಪ್ಯ


ಸಂತೆಯ ಕೊನೆಯ ವ್ಯಾಪಾರ

ಈಗ ಭಯವಾಗಿದೆ ಎನಗೆ

ಸಂಸಾರ ಸಂತೆ ಮುಗಿಸಲು

ಆದರೂ ಮುಗಿಸಲೇ ಬೇಕು

ಮನೆಗೆ ಹೋಗಲೇ ಬೇಕು


Rate this content
Log in

Similar kannada poem from Abstract