ಶಶಿ
ಶಶಿ
ಅಂಬರದಲ್ಲಿ ಮೂಡಿದ ಇಂದಿರನ ಹೋಲುವ ಚಂದಿರ
ಶಶಿಧರ ಬರುವ ಮೊದಲೇ ಮನಸಿಂದ ಓಡಿದ ದಿನಕರ
ನೋಡಲು ಎಷ್ಟು ಸುಮಧುರ ಅವ ಸುರಸುಂದರ
ಇವನೇ ಜಗದ ಚೋರ ಚೆಲುವಿನ ಚಿತ್ತಾರ
ಮೇಘಗಳ ಸಾಲುಗಳ ನಡುವಲ್ಲಿ ವಿಹರಿಸುವೆ
ಅರೆಕ್ಷಣ ಕೆಲಕಾಲ ಕಣ್ಣಿಗೆ ಕಾಣದೆ ಮಾಯವಾಗುವೆ
ನಿನ್ನ ನೋಡುವುದೇ ಮನಸ್ಸಿಗೆ ಉಲ್ಲಾಸ
ನಿನ್ನ ನೋಡುತ್ತ ಮರೆಯಾಗುವುದು ಆಯಾಸ
ನಕ್ಷತ್ರ ಪುಂಜಗಳ ಅಡಿಯಲ್ಲಿ ಬಂಧಿಯಾಗಿರುವೆ
ಅವುಗಳ ನೋಡುತ್ತಾ ನಗೆಯ ಮನಸಾರೆ ಚೆಲುವೆ
ಮಕ್ಕಳ ಪಾಲಿಗೆ ನೀನುತಾನೇ ಆಟಿಕೆಯ ಗೊಂಬೆ
ನಾಚುವಳು ನಿನ್ನ ಕಂಡು ಇಂದ್ರಲೋಕದ ಅಪ್ಸರೆ ರಂಭೆ
