STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಶ್ರಾವಣದ ಸಿರಿ

ಶ್ರಾವಣದ ಸಿರಿ

1 min
302

ಆಷಾಢದ ಮಬ್ಬು ಕಳೆಯಿತು

ಶ್ರಾವಣದ ಮಿಂಚು ಹೊಳೆಯಿತು


ದುಗುಡ ಮೇಘಗಳುಲಿದವು

ಸಡಗರದಿ ಭೋರ್ಗರೆದವು

ಭೋಮವ್ಯೋಮಗಳ ಬೆಸೆದವು

ಕುಂಭ ದ್ರೋಣ ಮಳೆಗರೆದವು


ಧರಣಿದೇವಿಯು ತಣಿದಳು

ಹಸುರುಡುಗೆಯಿಂ ನಲಿದಳು

ಶರವಣನಾಗಮಕೆ ಬಿರಿದಳು

ಹಸಿದ ಮಕ್ಕಳನು ಪೊರೆದಳು


ಸಿರಿಸಂಪದವೆಲ್ಲೆಡೆ ತುಂಬಿತು

ಹಬ್ಬಗಳಾ ಸರದಿ ಬೆಳೆಯಿತು

ಹಸಿರು ತೋರಣ ಕುಣಿಯಿತು

ಶರವಣನ ಸಂತಸವರಳಿತು


Rate this content
Log in

Similar kannada poem from Abstract