STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಶಾಶ್ವತ ನೆಮ್ಮದಿ

ಶಾಶ್ವತ ನೆಮ್ಮದಿ

1 min
552

ಇಷ್ಟು ದೊರಕಿದರೆ

ಇನ್ನಷ್ಟು ಬೇಕೆಂಬ

ಇನ್ನಷ್ಟು ದೊರಕಿದರೆ

ಮತ್ತಷ್ಟು ಬೇಕೆಂಬ

ಅತಿ ಆಸೆ ತುಂಬಿಹ

ಈ ಜಗದೊಳಗೆ

ಎಲ್ಲಿರುವುದು ನೆಮ್ಮದಿ?

ಹಸಿದಾಗ ಹೊಟ್ಟೆಗೆ

ಹೊಟ್ಟೆ ತುಂಬಿರೆ ಬಟ್ಟೆಗೆ

ಇವೆರಡೂ ದೊರೆತೊಡೆ

ಕಾಮಿನಿ ಕಾಂಚನಗಳಿಗೆ

ಹೋರಾಟ ಮಾಡುವ

ತೃಪ್ತಿಯೇ ಇರದ ಮನಕೆ

ಎಲ್ಲಿರುವುದು ನೆಮ್ಮದಿ ?

ರೋಗ ನಿವಾರಣೆಗೆ

ದೊರಕುವ ಮದ್ದು

ಸಾವಿನ ಕರಿನೆರಳ

ಮರೆಸುವ ಹುಟ್ಟು

ಮರುಭೂಮಿಯ

ನೀರಿನ ಬುಗ್ಗೆ ಗಳು

ಅರೆಕಾಲಿಕ ನೆಮ್ಮದಿ?

ಈ ಜಗದೊಳಗೆ

ಎಲ್ಲಿಹುದು ನೆಮ್ಮದಿ ?

ಯಾರಿಗೆ ಇಹುದು ?

ಸಂಪೂರ್ಣ ನೆಮ್ಮದಿ?

ಕ್ಷಣ ಭಂಗುರ ಬಾಳಿನೊಳು

ಇಹುದು ಅರೆ ಘಳಿಗೆಯ

ಅರೆಕಾಲಿಕ ನೆಮ್ಮದಿ.

ಪ್ರಾಪಂಚಿಕ ಸುಖದ

ಭ್ರಮೆಯೊಳಿಹುದು 

ನೆಮ್ಮದಿಯ ಮರೀಚಿಕೆ

ಪಾರಮಾರ್ಥಿಕ ಸಾಧನೆಯ

ಮಾರ್ಗದೊಳಿಹುದು

ಸತ್ಯ ಶಿವ ಸುಂದರದ

ಶಾಶ್ವತ ನೆಮ್ಮದಿ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract