ರಕ್ಷಾಬಂಧನ
ರಕ್ಷಾಬಂಧನ
ಸ್ನೇಹದ ಪ್ರತಿರೂಪ ಈ ರಕ್ಷಾಬಂಧನ
ಪ್ರೀತಿಯ ಸಂಕೇತ ಈ ರಕ್ಷಾಬಂಧನ
ಅಣ್ಣನಿಗೆ ತಂಗಿ ರಕ್ಷೆ ಕಟ್ಟುವ ಸಡಗರ
ಅಣ್ಣ ..ತಂಗಿಯ ಹಾರೈಸುವ ಕ್ಷಣವೇ ಸುಮಧುರ
ನಗುವ ಅಣ್ಣನ ಪ್ರೀತಿಯ ಕಡಲಲ್ಲಿ ತೇಲುವ ತಂಗಿ
ಸ್ನೇಹ ಎಂಬ ಆಗಸದಲ್ಲಿ ಹಾರುವ ಅಣ್ಣ
ಅವರವರ ಸ್ನೇಹಕ್ಕೆ ಸಾಟಿ ಯಾರು?
ಅವರ ಬಾಂಧವ್ಯಕ್ಕೆ ಸರಿಸಾಟಿ ಯಾರು?
ಅಣ್ಣನ ಕೈಗೆ ರಕ್ಷೆಯ ಕಟ್ಟಿ ಆರತಿ ಬೆಳಗುವಳು
ಹಣೆಗೆ ಪ್ರೇಮದಿ ತಿಲಕವಿಡುವಳು
ಸೋದರನ ಕಾಲಿಗೆ ಬಿದ್ದು ನಮಿಸುವಳು
ಕೊನೆಗೆ ಅವನ ಪ್ರೀತಿಯ ಗೂಡು ಸೇರುವಳು
ದ್ವೇಷ ಮರೆಸಿ ಸ್ನೇಹ ಚಿಗುರಿಸುವ ಶಕ್ತಿ
ಅವರೊಂದಿಗೆ ನಾವೆಂದೂ ಇರುತ್ತೇವೆ ಎಂಬ ಭಾಷೆ
ಸ್ನೇಹವೇ ಇದರ ಶಾಶ್ವತ ತತ್ವ
ಇದುವೇ ರಕ್ಷಾಬಂಧನದ ಮಹತ್ವ
