STORYMIRROR

Prajna Raveesh

Classics Inspirational Children

4  

Prajna Raveesh

Classics Inspirational Children

ಅಮ್ಮನ ಋಣ

ಅಮ್ಮನ ಋಣ

1 min
268


ಹಗಲಿರುಳು ಕಷ್ಟಪಟ್ಟು ದುಡಿದು

ತನ್ನ ಇಡೀ ಜೀವನವನ್ನೇ ತೇಯ್ದು

ಮಕ್ಕಳ ಹಿತಕ್ಕಾಗಿ ತನ್ನ ನೋವ ಮರೆತು

ನಗುತಲಿರುವಳು ಎಲ್ಲರೊಳು ಬೆರೆತು!!


ಬಾಳಪಯಣದಿ ಸಾಗುವ ದಾರಿಯು ದೂರ

ಮುಟ್ಟಬೇಕು ನೀನು ಎಂದಿಗೂ ಗೆಲುವಿನ ತೀರ

ಜೀವನದಿ ಕಲ್ಲು ಮುಳ್ಳುಗಳು ಚುಚ್ಚಿದರೂ ನೀನು

ಹಿಂದಿರುಗದೇ ನಡೆ ಮುಂದೆ ನಿನ್ನ ಜೊತೆಗಿರುವೆ ನಾನು!!


ನಿನ್ನ ಬಾಳಿನ ಹಾದಿಯು ಸಿಹಿಯಾಗಿರಲೆಂದು 

ನಾನು ಕಹಿಯುಂಡರೂ ಪಟ್ಟಿರುವೆ ಶ್ರಮವ 

ನಿನ್ನ ಮೊಗದಲಿ ಗೆಲುವಿನ ನಗೆ ಕಾಣಲೆಂದು

ಬಯಸಿಹೆ ಎಂದೆಂದೂ ಮರೆಯದಿರು ನನ್ನೀ ಋಣವ!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics