ಮಗು
ಮಗು
ಕೂಸು ಇರಬೇಕು ಮನೆಯೊಳಗೆ
ಬೇಸರ ಕಳೆಯಲು ಸಂತಸ ತರಲು
ಸ್ವಚ್ಛಗೊಳಿಸಿದ ನೆಲವು ಕೆಸರಾಗಿಸಿದರೂ
ಮನವ ಹಸಿರಾಗಿಸಲು
ಮಗುವೊಂದಕ್ಕೆ ಹರಕೆ ಹೊತ್ತವರೆಷ್ಟೋ
ಎಳೆಯ ಕಂದನ ರಸ್ತೆಯ ಬದಿಯಲ್ಲಿ ಎಸೆದವರೆಷ್ಟೋ
ಬಯಸಿದವರಿಗಿಲ್ಲ ಸಂತಾನ ಯೋಗ
ಸಿಕ್ಕವರು ಮಾಡಿಬಿಟ್ಟರು ಕಂದನ ವಿಯೋಗ
ಮಗುವೊಂದು ನಗುತಿದ್ದರೆ ಮನೆಯದು ಸ್ವರ್ಗ
ಮಗುವಿನ ತುಂಟಾಟ -ತರಲೆಗಳಿರದೆ ಸುಖದಲ್ಲೂ ಸಿಗದು ನೆಮ್ಮದಿ
ಅತ್ತು ಕರೆದು ತನ್ನ ಬೇಡಿಕೆಯನ್ನಿಡುವ
ಅತ್ತಾಗ ಮೌನಿಯಾಗಿ ಬಂದಂತೆ ಸಮಾಧಾನ ಪಡಿಸಲು
ಮಗುವೊಂದಿರಬೇಕು
ಮನೆಯೊಳಗೆ ಸಂತಸವ ತರುತಲಿರಬೇಕು
