STORYMIRROR

Pushpa Prasad

Children Stories Inspirational Others

4  

Pushpa Prasad

Children Stories Inspirational Others

ಕರುಣಾಮಯಿ ತಾಯಿ

ಕರುಣಾಮಯಿ ತಾಯಿ

1 min
263

ತಾಯಿಯೆಂದರೆ ಎಂಥ ಸಮಾಧಾನ ಮನಸಿಗೆ

ಮುಖ ನೋಡಿದಾಗ ಕರಗುವ ನೋವುಗಳಿಗೆ

ನನ್ನ ಮೊದಲ ತಿಳುವಳಿಕೆಯ ಸಿರಿದೇವಿ ಅವಳು

ತಾಯಿಯಿಂದ ಕಲಿತದೆಂದೂ ಮರೆಯಲಾಗದು!!


ಜಗದಿ ಎಲ್ಲರನ್ನು ಕಾಯುವ ಆ ಭಗವಂತನು 

ಅವಳ ಮಮತೆಯನ್ನು ಕಂಡು ಶರಣಾದನು

ಈ ಧರೆಯ ಮೇಲೆ ತ್ಯಾಗದ ಪ್ರತೀಕ ಅವಳು

ಇಂಥ ಮಹಾದೇವಿಗೆ ಸಮಾನರು ಯಾರಿಹರು? 


ಕರುಣೆಯೇ ಅಳಿಸಿದ ಮಾನವನ ಜಗದಲ್ಲಿ 

ಅದನ್ನು ಉಳಿಸಿದ ಕರುಣಾಮಯಿ ಅವಳು

ಮಕ್ಕಳ ಕಣ್ಣೀರಿಗೆ ಬೇಗ ಕಣ್ಣೀರಾಗುವವಳು

ನೋವಲ್ಲೂ ನಗು ನಗುತಾ ಇರುವಳು ತಾಯಿ!!


ನಾನೆಂದು ಕಾಣಲಿಲ್ಲ ನಿಜವಾದ ದೇವರನ್ನು

ಎಣಿಸಿರುವೆ ಇರಬಹುದು ಇವಳಂತೆ ಅವನು

ದೇವತೆಯ ರೂಪ ಪಡೆದ ಅಮ್ಮನೇ ಧನ್ಯಳು

ಇವಳ ಪ್ರೀತಿ ಪಡೆದ ನಾನೇ ಪುಣ್ಯವಂತಳು!!


Rate this content
Log in