STORYMIRROR

Vijaya Bharathi

Abstract Classics Inspirational

3  

Vijaya Bharathi

Abstract Classics Inspirational

ರಜತಗಿರಿಗಳಡಿಯಲ್ಲಿ

ರಜತಗಿರಿಗಳಡಿಯಲ್ಲಿ

1 min
165


ಕ‌ಣ್ಮ‌ನ‌ಗ‌ಳಾತ‌ಣಿಪ‌

ಹಿಮ‌ಗಿರಿಯ‌ ಶಿಖ‌ರ‌ಗ‌ಳು

ಅವ‌ರ್ಣ‌ನೀಯ‌

ಅನುಭೂತಿಗ‌ಳು

ಇವುಗ‌ಳೇಮ್

ವಿಶ್ವ‌ಕ‌ರ್ಮ‌ನ‌

ವಿಸ್ಮ‌ಯ‌ಗ‌ಳೋ?

ಉತ್ತರಾಖಂಡ‌ದಾ

ಊರ್ಧ್ವ‌ಗಾಮಿಗ‌ಳೋ?

ದಿವಿ ಭುವಿಯಾ

ಸೇತುವೆಗ‌ಳೋ?

ವ್ಯೊಮಕೇಶ‌ನ‌

ಕಂಠಾಭ‌ರ‌ಣ‌ಗ‌ಳೋ?

ಧೂರ್ಜ‌ಟಿಯ‌

ಜ‌ಟಾಜೂಟ‌ಗ‌ಳೋ?

ದೇವ‌ಭೂಮಿಯ‌

ದಿವ್ಯ‌ ಚಿತ್ತಾರಗಳೋ?

ದೇವ‌ಗಂಗೆಯಾ

ಭ‌ವ್ಯ‌ ವೇದಿಕೆಯೋ?

ವ‌ರ್ಣ‌ನೆಗೆ ಸಿಲುಕ‌ದೀ

ಹ‌ರಿಹ‌ರ‌ರ‌ ವಿಭೂತಿ

ಇದೊಂದು ದಿವ್ಯಾನುಭೂತಿ

  



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract