ಪತಂಗ
ಪತಂಗ


ಪತಂಗದ ಜೀವನ ಚಕ್ರವೇ ವಿಚಿತ್ರ ವಿಸ್ಮಯ!
ಹುಳು ರೂಪದಲ್ಲಿ ಹುಟ್ಟುವ ಮರಿಗಳು,
ಮುಳ್ಳು ಹೊತ್ತು ಸಾಗುವ ಚಿಕ್ಕ ಸರ್ಪಗಳು,
ಹಸಿರೆಲೆಗಳ ತಿಂದು ಬೆಳೆಯುವ ಜೀವಿಗಳು,
ಬದುಕ ಬೆಳಕನ್ನೇ ಬಿಟ್ಟು ತಾನೇ ನೆಯ್ದ
ದಾರದ ಕತ್ತಲೊಳಗೆ ಬಂಧಿಯಾಗುವಾ ಹುಳುಗಳು,
ಕೊನೆಗೆ, ರೂಪಾಂತರದ ಜೊತೆಗೆ ವರ್ಣ
ಚಿತ್ತಾರಗಳ ಮೆರಗಿಂದ ಹಕ್ಕಿಯಂತೆ ಹಾರುವ
ಕುಶಲಕರ್ಮಿಗಳು!!!