ಕಾಲ
ಕಾಲ

1 min

302
ಮರಳುಗಾಡಿನಲ್ಲಿ
ಎದ್ದು ನಿಂತ
ಉಸುಗಿನ ಮಹಲು
ಬಿಸಿ ಗಾಳಿ
ಬಡಿಯುವ ತನಕ,
ಶೀತಲ ನಾಡಿನಲ್ಲಿ
ಎದ್ದು ನಿಂತ
ಮಂಜುಬಂಡೆಯ ಮಹಲು
ಮಂಜುಗಡ್ಡೆ
ಕರಗುವ ತನಕ,
ನನ್ನಂತಃಕರಣದಲ್ಲಿ
ಎದ್ದು ನಿಂತ
ಒಲವಿನ ಮಹಲು
ಉಸಿರಿನ
ಕೊನೆಯ ತನಕ!!