ಪ್ರಾಕಾಮ್ಯ
ಪ್ರಾಕಾಮ್ಯ

1 min

61
ಪ್ರಕೃತಿಯ ಲಾಲಿತ್ಯದಲಿ
ಪ್ರಕಾಶಮಾನನಾದ
ಪ್ರಭಾಕರನ
ಪ್ರಖರವಾದ ರಶ್ಮಿಗಳ ಚೇತನದಲಿ
ಪ್ರಜ್ಞಾಹೀನತೆಯ ನಾಶದಲಿ
ಪ್ರವಾಸದ ಮುಂಜಾವಿನಲಿ
ಪ್ರಗತಿಯ ಕನಸಲ್ಲಿ
ಪ್ರಬುದ್ಧತೆಯ ಮಜಲಿನಲ್ಲಿ
ಪ್ರಕಾರಗಳ ಪರಾಮರ್ಶೆಯಲಿ
ಪ್ರಯತ್ನಗಳ ಪಥ ಹಿಡಿದು
ಪ್ರಶಂಸೆಗಳ ನಿರೀಕ್ಷೆಯಿಲ್ಲದೆ
ಪ್ರಾಕಾಮ್ಯದ ದಾರಿ ಹಿಡಿದಿರುವೆ