ಪ್ರಯತ್ನ
ಪ್ರಯತ್ನ
ಆಗುವುದೆಂದು ಕುಳಿತುಕೊಂಡರೆ ಕೆಲಸ ಆಗುವುದೇ?
ಸುಮ್ಮನೆ ಇದ್ದರೆ ಗುರಿ ತಲುಪುವುದೇ?
ಪ್ರಯತ್ನದಿಂದ ಸಕಲ ಕಾರ್ಯಸಿದ್ದಿ
ಉಪಯೋಗಿಸಿಕೋ ಕೊಂಚ ನೀ ಬುದ್ಧಿ
ಹಿಡಿತ ಇರಲಿ ಕಾಯಕದ ಮೇಲೆ
ಭಕ್ತಿ ನಿಷ್ಠೆ ಇರಲಿ ದುಡಿಮೆಯ ಮೇಲೆ
ಕಾಯಕವೇ ಕೈಲಾಸ ತಿಳಿದವನಿಗೆ
ದುಡಿಮೆಯೇ ದೇವರು ಅವನಿಗೆ
ಛಲದಿಂದ ಬಲದಿಂದ ಎದುರಿಸು ನೀನು
ಸೋಲದೆ ಮುನ್ನುಗ್ಗು ಗೆಲುವಿದೆ ನಿಂಗೆ
ಕೈ ಕಟ್ಟಿ ಕುಳಿತರೆ ವ್ಯರ್ಥ ಬಾಳು
ಸರಿಯಲ್ಲವೇ ಯೋಚಿಸಿ ನೀ ಹೇಳು
