ಪ್ರಕೃತಿಯ ಕೊಡುಗೆ
ಪ್ರಕೃತಿಯ ಕೊಡುಗೆ
ತನುವ ತಬ್ಬಿದೊಡೆ
ಬಿಸಿಯುಸಿರ್ಬೆರೆಸಲ್
ನಯನಗಳ್ಮುಚ್ಚುವಾಟ
ಗೋಪುರಗಳೇರಿ
ಬೆರಳುಗಳುರುಳಿಸಲ್
ಕತ್ತಲಲ್ಬಿಚ್ಚಿಡುವಾಟ
ಪಿಸುಧನಿಗೆ ಕೊಟ್ಟ
ಕರ್ಣಗಳ್ನಾಲಿಗೆಯಲ್
ಸವರಿಸವರುವಾಟ
ಅದರಗಳದರದೋಳ್
ಮುತ್ತಿಟ್ಟ ರಾಣಿ
ದುಂಬಿಯ ಚೀರಾಟ
ಗೆದ್ದು ಸೋಲುವ
ಸೋತು ಗೆಲ್ಲುವುದೀ
ನಿಸರ್ಗದಾಟ