ಪ್ರಕೃತಿ ಮಾತೆ
ಪ್ರಕೃತಿ ಮಾತೆ
ಪ್ರಕೃತಿ ಮಾತೆ ಮನುಕುಲ ರಕ್ಷಣಾ ದಾತೆ
ನಮ್ಮಯ ರಕ್ಷಿಸೋ ಕರುಣ ಜಾತೆ
ಎತ್ತಲಿ ನಿನಗೆ ಪ್ರೀತಿಯ ಆರತಿ
ನೀನೇ ಈ ಜಗವ ಬೆಳಗೋ ಸಾರಥಿ
ಮೂಡಣದಿ ಮೂಡುವ ರವಿ ನಿನ್ನ ಶೋಭೆಯನ್ನು ಹೆಚ್ಚಿಸಲು
ಹಕ್ಕಿಗಳ ಚಿಲಿಪಿಲಿ ಗಾನ ನಿನ್ನ ಸುಪ್ರಭಾತ ಮೊಳಗಿಸಲು
ಮರ ಗಿಡ ಬಳ್ಳಿ ಹಚ್ಚಹಸಿರಿನಿಂದ ಕಂಗೊಳಿಸಲು
ಪರಿಸರವೇ ಇದಕ್ಕೆ ಸರಿಸಾಟಿ ಎನ್ನಲು
ಕಣ್ಣಿಗೆ ಕಾಣದ ಅದೆಷ್ಟು ವಿಸ್ಮಯ ನಿನ್ನಲ್ಲಿ
ಅದೆಷ್ಟು ಮಂದಿ ಬದುಕು ಕಟ್ಟಿರುವರು ನಿನ್ನ ಮಡಿಲಲ್ಲಿ
ನಿನ್ನಯ ನಾಶ ಮಾಡುತ್ತ ಹೋದಲ್ಲಿ
ನಮ್ಮಯ ವಿನಾಶ ಕಂಡಿತ ಈಗಿಂದಲ್ಲಿ
