STORYMIRROR

radheya kanasugalu

Romance Classics Others

3  

radheya kanasugalu

Romance Classics Others

ಪ್ರೀತಿಯ ಬೇಡಿಕೆ

ಪ್ರೀತಿಯ ಬೇಡಿಕೆ

1 min
146

ಕನಸು ಕಾಣುವ ಕಂಗಳಿಗೆ ಬೇಕು ನೀನು

ಪ್ರೀತಿ ತುಂಬಿದ ಹೃದಯದ ಬಡಿತವು ನೀನು

ನೀನೆ ತುಂಬಿರುವೆ ನನ್ನ ಮನದಲ್ಲಿ 

ಉಚ್ಛ್ವಾಸ ನಿಶ್ವಾಸ ಕ್ರಿಯೆಗೆ ಉಸಿರು ನೀನು


ಮುಂಜಾವಿನ ನನ್ನ ಸೂರ್ಯ ನೀನು

ತಂಪಾದ ರಾತ್ರಿಯ ಸಿಹಿಕನಸು ನೀನು

ಈ ಜನ್ಮಕ್ಕೆ ಬೇಡ ಬೇರೇನೂ, ಮಂಡಿಯೂರಿ

ಕೇಳುವೆ ಒಲವಿನ ಭಿಕ್ಷೆಯ,

ಯೋಚಿಸದೆ ನೀಡುವೆಯಾ ನಿನ್ನ ಪ್ರೀತಿಯ ನೀನು...?

                       


                   


Rate this content
Log in

Similar kannada poem from Romance