ಪ್ರೀತಿಗೆ ಸೋತು ಶರಣಾದೆ
ಪ್ರೀತಿಗೆ ಸೋತು ಶರಣಾದೆ
ನಿನ್ನ ಪ್ರೀತಿಗೆ ಸೋತು ಶರಣಾದೆ
ನಿನ್ನ ಸ್ನೇಹಕೆ ಮನಸೋತು ಮಗುವಾದೆ
ಕನಸಲು ನಿನ್ನದೇ ಕನವರಿಕೆ
ಕೇಳು ಜಾಣೆ ಮನಸಲು ನಿನ್ನದೇ ಚಡಪಡಿಕೆ
ನನ್ನುಸಿರೇ ಹೇಗೆ ಹೇಳಲಿ
ಮನದೊಳಗೆ ಅಡಗಿರುವ ಅಂತರಾಳದಲ್ಲಿ
ಮೊಗ್ಗಾಗಿರುವ ಪ್ರೀತಿಯನು ಎಂದು
ಹೂವಾಗುವುದೋ ಎಂದು ಕಾಯುತಿರುವೆ

