STORYMIRROR

Jyothi Baliga

Romance Others

3  

Jyothi Baliga

Romance Others

ಒಲವು

ಒಲವು

1 min
12.3K

ಚೈತ್ರ ತಂದ ಚಿಗುರಿನ ಹಾಗೆ ನಿನ್ನ ಸ್ನೇಹವು

ಮಳೆ ಹನಿಗೆ ಚಿಗುರೊಡೆದಿದೆ ಮನದಲಿ ಒಲವು

ಹೊಸತಾಗಿ ಮೂಡಿದೆ ಈ ಹೃದಯದಲಿ

ಪ್ರೀತಿಯ ಸೆಳವು

ನಿನ್ನ ಕಾಣಲು ಪ್ರತಿಕ್ಷಣವು ಆಸೆ ಪಡುತಿದೆ

ನನ್ನೀ ಮನವು

ಅತಿವೃಷ್ಟಿಯ ಮಳೆಯಂತೆ ಸುರಿಸಬೇಡಾ ನಿನ್ನ

ಪ್ರೇಮವ

ಸುತ್ತಲೂ ಪಚ್ಚೆ ಹಸಿರಿರುವಂತೆ ಹರಿಸು ಒಲವಿನ

ಸುಧೆಯ

ಬಯಕೆಯೆಂಬ ಮೋಹಕೆ ಆತುರದಲಿ ಬಿದ್ದು

ಕೊರಗದಿರಲಿ ಮನವು

ಮದುವೆಯೆಂಬ ಶಾಸ್ತ್ರದಲಿ ಒಂದಾಗಲಿ

ನಮ್ಮಿಬ್ಬರ ತನುವು

ಅರಿಯಬೇಕು ಹಿರಿಯರ ಆಶೀರ್ವಾದವೇ

ಪ್ರೀತಿಗೆ ಗೆಲುವು                                               

ಕೊನೆತನಕ ಹೀಗೆ ಜೊತೆಯಾಗಿರಲಿ‌

ನಮ್ಮಯ ಒಲವು



Rate this content
Log in

Similar kannada poem from Romance