ನನ್ನ ನೆಚ್ಚಿನ ಭೂಮಿ
ನನ್ನ ನೆಚ್ಚಿನ ಭೂಮಿ
ಇದು ನನ್ನ ಭೂಮಿ
ನನ್ನ ನೆಚ್ಚಿನ ಭೂಮಿ
ಅದೇ ಭರತ ಭೂಮಿ
ಜ್ಞಾನ ಧ್ಯಾನಗಳ ನಾಡು
ಶಮೆ ದಮೆ ಸಾಧಕರು
ಹುಟ್ಟಿದ ಪುಣ್ಯ ಭೂಮಿ
ಧರ್ಮ ಕರ್ಮಗಳ ಭೂಮಿ
ಯೋಗ ಭೋಗಗಳ ಭೂಮಿ
ವಿವಿಧತೆಯಲ್ಲಿ ಏಕತೆ
ಸಾರುವ ವಿಶಾಲ ಭೂಮಿ
ಆರ್ಯ ಸಂಸ್ಕೃತಿ ಬೆಳೆದು
ಬೆಳಕು ತೋರಿದ ಭೂಮಿ
ಅದೇ ನನ್ನ ನೆಚ್ಚಿನ ಭೂಮಿ
ಅದೋ ಭರತ ಭೂಮಿ
