ನಂದಾದೀಪ
ನಂದಾದೀಪ
ಮನೆ ಮನೆ ಹಚ್ಚಿ ನಂದಾದೀಪ
ತೊಲಗುವುದು ಅಳಿಯುವುದು ಬಂದ ಶಾಪ
ಆರಲಿ ನಶಿಸಲಿ ಕೋರೋಣ ತಾಪ
ಹಚ್ಚಿರಿ ಹಚ್ಚಿರಿ ನಂದಾದೀಪ
ನವ ಗಳಿಗೆಯ ನವ ನಿಮಿಷ
ಏಕತೆ ಹೆಚ್ಚಿಸುವುದು ಪ್ರತಿನಿಮಿಷ
ಭಾರತೀಯರ ಈ ಅಮೂಲ್ಯ ನಿಮಿಷ
ಮುಂದೆ ರೂಪಿಸುತ್ತದೆ ಒಳ್ಳೆ ಭವಿಷ್ಯ
ಈ ಕತ್ತಲ ಸೋಲಿಸಲಿ ದೀಪ
ತಣ್ಣಗಾಗಲಿ ಕೋರೋಣ ಉಗ್ರರೂಪ
ಹೋಗಲಿ ಈ ಮನುಕುಲದ ಶಾಪ
ಮೊದಲಿನ ದಿನದಂತೆ ಉರಿಯಲಿ ಜಗದಲ್ಲಿ ನಂದಾದೀಪ
