STORYMIRROR

Pushpa Prasad

Abstract Romance Others

4  

Pushpa Prasad

Abstract Romance Others

ನಲ್ಲಾ

ನಲ್ಲಾ

1 min
11

ಮಳೆಯಾಗಿ ಬಂದು

ಒಲವಾಗಿ ಮನ ತಣಿಸಿ

ಭಾವನೆಯ ಜೊತೆಯಾಗಿ

ಮಿಡಿದಿರುವ ನಲ್ಲಾ!!


ತಂಗಾಳಿಯಾಗಿ ಸುಳಿದು 

ಈ ಮನಕೆ ಮುದವ ನೀಡಿ 

ಮನಸನ್ನು ಸೆಳೆದು

ಜೊತೆಯಾಗಿ ಸಾಗಿರುವ ನಲ್ಲಾ!!


ಬೆಳದಿಂಗಳಾಗಿ ಸುರಿದು 

ಹಿತವಾಗಿ ಈ ಮೈಯ ಬಳಸಿ 

ಬೆಚ್ಚಗೆಯ ಕನಸೊಂದನ್ನು

ಬೆಸೆದಿರುವ ನಲ್ಲಾ!!


ಈ ಪ್ರೀತಿಯ ಗುಡಿಗೆ ದೈವವಾಗಿ 

ಒಲವಾಗಿ ನನ್ನ ಬಾಳ ಬೆಳಗಿ

ಸಾಗುತಿರುವ ಬದುಕಿನ

ಜೊತೆಗೆ ಉಸಿರಾಗಿರುವ ನಲ್ಲಾ!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract