STORYMIRROR

Vijaya Bharathi

Abstract

1  

Vijaya Bharathi

Abstract

ನಿಸರ್ಗ

ನಿಸರ್ಗ

1 min
199

ಬಾನೆತ್ತರಕೆ ಬೆಳೆದ ಆ ಸಾಲು ವೃಕ್ಷಗಳು

ಆದರವುಗಳ ನೋಡಲು ಸಾಲದೀ ಕಣ್ಣುಗಳು

ಎತ್ತ ನೋಡಿದರತ್ತ ಹಚ್ಚ ಹಸಿರು

ಸುತ್ತಲೂ ಗಿರಿಮಾಲೆ ವನದೇವಿಗೆ

ವನವೇ ತನದೆಂಬಂತೆ ನಲಿಯುತಿಹ ಚಿಗುರೆಗಳು

ನಡು ನಡುವೆ ವಲ್ಮೀಕ ನೆನಪಿಸುತ ವಾಲ್ಮೀಕಿ

ಶಾಂತ ವಾತಾವರಣದೀ ಸಿರಿವನ

ಧ್ಯಾನ ಪೋಷಕ ತಾಣ ತಪೋವನ

 ಋಷಿಮುನಿಗಳಾ ನೆಲೆಮನೆ ಅಂದು

ಆದರಾರೂ ಇಲ್ಲ ತಪಗೈಯ್ಯಲಿಂದು

ಮುಳುಗುತಿಹ ನೇಸರನ ಕಿರಣಗಳು ಮೈದಡವೆ

ನಾಚಿ ನೀರಾಗುತಿಹಳು ನೀರೆ ವನದೇವಿ

ಕಂದಿಹಳು ಆ ತರುಣಿ ರವಿಯ ನಿರ್ಗಮನದಿ

ಆದರೆ ಅಳುಕಳು ಎಂದೂ 

ಭರವಸೆಯ ಹೊಂದಿಹಳು

ಮತ್ತೆ ಉದಿಸಿ ಬರುವ ತನ್ನಿನಿಯನಿಗಾಗಿ

ಹಗಲೊಳು ಮೋಹಕ

ಇರುಳೊಳೋ ಭಯಾನಕ 

ರುದ್ರ ರಮಣೀಯವೀ ನಿಸರ್ಗ ಸೊಬಗು


Rate this content
Log in

Similar kannada poem from Abstract