ನಿರಾಸೆಯ ಬಿಟ್ಟು ಸಾಗಬೇಕು ಮುಂದೆ
ನಿರಾಸೆಯ ಬಿಟ್ಟು ಸಾಗಬೇಕು ಮುಂದೆ
ನಿರಾಸೆಯ ಬಿಟ್ಟು ಸಾಗಬೇಕು ಮುಂದೆ
ದುರಾಸೆಯ ಮಾಡಿ ಬೀಳಬಾರದು ಹಿಂದೆ
ಸಾವಿರಾರು ಸಲ ಸೋತರು ಕೂಡದಿರು ಕುಗ್ಗಿ
ಹಿಂದೆ ಹಾಕಬಾರದು ಹೆಜ್ಜೆಯ ನೋವು ನುಂಗಿ
ಸತತ ಪರಿಶ್ರಮವಿರದೆ ಈಡೇರದೆಂದು ಕನಸು
ನಿರಂತರ ತೆಗಳಿಕೆ ಅವಮಾನವಾದರೆ ಸಹಿಸು
ಅನರ್ಹರ ಉಪಟಳವೆಂದೂ ನೀ ನಿರ್ಲಕ್ಷಿಸು
ನಿನ್ನವರೇ ಹೀಯಾಳಿಸಿ ಮಾತಾಡಿದರು ಕ್ಷಮಿಸು
ಗುರಿಯೊಂದೇ ಇರಲೆಂದೂ ನಿನ್ನಯ ಕಂಗಳಲ್ಲಿ
ಅವಿರತ ಪ್ರಯತ್ನಗಳು ಇರಲಿ ಸದಾ ಸೋಲಿನಲ್ಲಿ
ಹಿತ ಶತ್ರುಗಳು ಜೊತೆಯಿರಬೇಕು ನಿನ್ನ ಕಣ್ಣೆದುರಲ್ಲಿ
ತಾಳ್ಮೆಯೊಂದಿರಲಿ ನೀನು ಸಾಧಿಸುವ ದಿಕ್ಕಿನಲ್ಲಿ
ಹತಾಶೆಯ ಮನವನು ಅಳಿಸಿ ನಗುತ ಸಾಗಬೇಕು
ಕಾಲಚಕ್ರ ತಿರುಗಿದಂಗ ನಾವು ಜೀವನ ನಡೆಸಬೇಕು
ಸಾಧಿಸಿ ತೋರಿಸಿದಾಗ ಜಗದೆಲ್ಲ ಜನರೂ ನಿನ್ನವರು
ನಿನ್ನ ನೋಡಿ ನಕ್ಕವರೇ ತಲೆ ತಗ್ಗಿಸಿ ನಮಸ್ಕರಿಸುವರು
