STORYMIRROR

Gireesh pm Giree

Children

2  

Gireesh pm Giree

Children

ನಿನಗಾಗಿ  ನಿನ್ನೊಳಗೆ ನಾನು

ನಿನಗಾಗಿ  ನಿನ್ನೊಳಗೆ ನಾನು

1 min
113


ಪ್ರೀತಿ ಕರೆಯುವುದೇ ನನಗಾಗಿ ಬರೆದೆ

ಪ್ರೇಮದ ಓಲೆಯ ಓದಿ ನಿನ್ನವ ನಾನಾದೆ

ಹಗಲು ಇರುಳಲ್ಲು ನಿನ್ನ ನೆನಪೇ ಚಂದ್ರಮುಖಿ

ನೀನೇ ನನ್ನ ಬಾಳ ಬೆಳಗು ಪ್ರೇಮಸಖಿ


ಚೆಲುವೆಯೇ ನಿನ್ನ ನೋಟಕ್ಕೆ ಮರುಳಾದೆ ಮರುಳೆ

ನಿನ್ನಿಂದ ಮನದಲ್ಲಿ ಸುರಿಯಿತು ಪ್ರೀತಿಯ ಹೂಮಳೆ

ನಿನಗಾಗಿ ಪಡೆದ ಈ ಜನುಮ ಪಾವನ

ತರುಣಿ ನಿನ್ನಿಂದ ರಂಗಾಯಿತು ನನ್ನ ಜೀವನ



ಮನ ಜಾರುವ ಮೈಮರೆಸುವ ನಿನ್ನ ಕಣ್ಣೋಟ

ಕನಸ್ಸಲೂ ಕೊಡುವಳು ನನಗೆ ಕಾಟ

ನನ್ನವಳು ಕಾಣದಿದ್ದಾಗ ಮನಸ್ಸಿನ ಹುಡುಕಾಟ

ಅವಳು ಕಂಡರೆ ನನಗಂತೂ ಬಾದೂಟ


ಪ್ರೇಮದ ಹೂವು ಅರಳುವಂತೆ ಮಾಡಿದ ಅಪ್ಸರೆ 

ಪ್ರೀತಿ ಗೂಡು ಕಟ್ಟುವಂತೆ ಮಾಡಿದ ಸಕ್ಕರೆ 

ಒಮ್ಮೆ ನೀನು ಮನಸಾರೆ ನಕ್ಕರೆ

 ಅದುವೇ ಸಮಾಧಾನ ನನ್ನ ಉಸಿರೇ


Rate this content
Log in

Similar kannada poem from Children