ನೀನೇ ಮೊದಲೇ ಬಾರೆ
ನೀನೇ ಮೊದಲೇ ಬಾರೆ
ನೀನೇಕೆ ಮೊದಲೆ ಬಾರೆ ನನ್ನ ರಸಧಾರೆ
ನೀನೇಕೆ ಈಗ ಬಂದೆ ನನ್ನ ಮನಸಾರೆ
ನಿನ್ನ ನೋಡಿದ ಮೊದಲ ಗಳಿಗೆ ಕರಗಿ ನೀರಾದೆ
ನಾ ಕಂಡ ಅದ್ಭುತವೇ ಸರಿ ವಿನೋದೆ
ಹಾಡುಹಗಲೇ ನಕ್ಷತ್ರವ ಆಗಸದಿ ತೋರಿಸಿದ ಅರಸಿ
ಪ್ರೇಮದ ಹೂಮಳೆ ಹೃದಯಾಳದಲ್ಲಿ ಸುರಿಸಿ
ನಾನಿಂದು ಎಂದು ನಿನ್ನಯ ಆಪತ್ ಬಂದು
ನೀನೆಂದು ನನ್ನ ನೆಚ್ಚಿನ ಜೀವದ ಆತ್ಮಬಂಧು
ಜನುಮ ಜನುಮದ ಪ್ರೀತಿಯ ಮರುಹಂಚಿಕೆ
ತೀರಿತು ನನ್ನ ಬಹುದಿನದ ಪ್ರೀತಿಯ ಬಯಕೆ
ನೀನೆಂದು ಹುಟ್ಟಿರುವೆ ನನಗಾಗಿ ನನ್ನುಸಿರೆ
ಈ ಪ್ರೀತಿ ಪ್ರೇಮ ಮಧುರ ಎಂದು ಹಸಿರೆ.
