STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಮುಂಗಾರು ಮಳೆ

ಮುಂಗಾರು ಮಳೆ

1 min
136

ಒಮ್ಮೆ ಮೋಡ ಒಮ್ಮೆ ಬಿಸಿಲು

ನಡುವೆ ಮಿಂಚು ಗುಡುಗು ಸಿಡಿಲು

ನೆಳಲು ಬಿಸಿಲುಗಳ ಜೂಟಾಟ

ನಭದಿ ಕಾರ್ಮೋಡಗಳ ಚೆಲ್ಲಾಟ

ನಡುವೆ ತುಂತುರು ಹನಿಗಳು

ಮುಂಗಾರು ಮಳೆ ಹನಿಗಳು

ಮುಂಗಾರು ವರ್ಷ ದ ಹರ್ಷ

ಭುವಿಗಾಯಿತು ಭಾವೋತ್ಕರ್ಷ

ತುಂತುರು ಹನಿಗಳ ಸಿಂಚನ

ಇಳೆಗಾಯಿತು ರೋಮಾಂಚನ

ರಂಗೇರಿತು ರೈತಮಕ್ಕಳ ಅಂಗಳ

ಭುವಿಗಾಯಿತು ಗರ್ಭಾಂಕುರ

ಇಳೆಯ ತೋಯಿಸಿತು ಮಳೆ

ಮುನ್ನಿನ ಮುಂಗಾರು ಮಳೆ

ಮುಂಗಾರು ಮಳೆಯಾಟ

ನಗರವಾಸಿ ಗಳ ಪರದಾಟ

ಬಿರುಗಾಳಿ ಸಹಿತ ಭೋರ್ಗರೆವ ಮಳೆ

ಕೆಳಗುರುಳುವ ಇಕ್ಕೆಲಗಳ ಮರಗಳು

ಹಾರಾಡುವ ಬಡವರ ಸೂರುಗಳು

ಕೇಳುವವರಾರು ಅವರ ಗೋಳು

ಸಂಜೆ ಮಳೆಯ ಭೋರ್ಗರೆತ

ತಂದಿತು ಸಂಚಾರಕೆ ಹಿಡಿತ

ನೀರು ತುಂಬಿದ ರಸ್ತೆಗಳು

ಕಿಕ್ಕಿರಿದು ನಿಂತಿಹ ವಾಹನಗಳು

ವಾಹನ ಸವಾರರ ಆತಂಕ ಇಂತು

ಮಳೆಯಲಿ ಮನೆ ಸೇರುವುದೆಂತೋ?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract