STORYMIRROR

Surabhi Latha

Romance Classics Others

4  

Surabhi Latha

Romance Classics Others

ಮುದಿ ಮುತ್ತು

ಮುದಿ ಮುತ್ತು

1 min
306

ಎಂದಾದರೊಮ್ಮೆ ಫಲಿಸಿತು ಒಲವು 

ಬಲೀದೀತು ಒಲುಮೆ 


ಕನಸ ಕಾಣಲು ಹಗಲಿರುಳು 

ಅದುವೇ ಆಯಿತು ನನಗೆ ಉರುಲು 


ನಿನ್ನ ನೋಟವೇ ಮಳೆ ಬಿಲ್ಲ ಸೆಳೆತ 

ಇಂದು ನೀನರಿಯೇ ನನ್ನೆದೆಯ ಬಡಿತ 


ಸಾಕು ಸಾಕಾಯಿತು ನಿನ್ನಲ್ಲಿ ಬೆರೆತ ಕನಸು 

ಇಂದು ನೀನಿಲ್ಲದೇ ಮೂಕವಾಯಿತು ಮನಸು 


ಬರುವೆಯೋ, ಬಾರೆಯೋ ಕಾಡಿದೆ ಸಂದೇಹ 

ಆಸೆಗಳ ಹಿಡಿತಕ್ಕೆ ಸಿಲುಕಿದೆ ನನ್ನೀ ದೇಹ 


ನಿನ್ನ ನೆನೆ ನೆನೆದು ಘಾಸಿಯಾಯಿತು ಮನ 

ನನ್ನ ಹೂಗೆನ್ನೆಗಳು ತೋಯುವಾಗ 

ನೀ ಅರೀಯದೇ ಹೋದೆ ನನ್ನೀ ಮನ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance