STORYMIRROR

Gireesh pm Giree

Children

2  

Gireesh pm Giree

Children

ಮೃಗಗಳ ಆಲಯ

ಮೃಗಗಳ ಆಲಯ

1 min
121

ಹಕ್ಕಿಗಳ ಸಂಗೀತ ನಾದದ ವಿಸ್ಮಯ

ಮನಕ್ಕೆ ಮುದ ನೀಡುವ ಪ್ರಾಣಿಗಳ ಕಂಡು ಆದೆ ತನ್ಮಯ

ಎಷ್ಟೊಂದು ಸುಂದರ ಮನೋಹರ ಮೃಗಗಳ ಆಲಯ?

ಪ್ರಾಣಿ-ಪಕ್ಷಿಗಳ ಎರಡನೇ ಅರಮನೆ ಈ ಮೃಗಾಲಯ


ತನು ಹೆದರಲು ಸಿಂಹಘರ್ಜನೆ

ತನು ಅರಳಲು ಮಯೂರ ನರ್ತನೆ

ಆಡಿ ಓಡುವ ಹರಿಣಗಳ ಹಿಂಡು

ಒಮ್ಮೆ ಬೆರಗಾದೆ ನಾ ಅದನ್ನ ಕಂಡು


ಗಜರಾಜನು ವಿಹರಿಸುತ್ತಿರಲು ಬಲು ಸಂತಸದಿ

ವ್ಯಾಗ್ರ ತನ್ನ ಮರಿಯೊಂದಿಗೆ ಮುತ್ತಿಡುಲು ಬಲು ಆನಂದದಿ

ಅಲ್ಲಿ ಕಾಡು ನಾಡಿಗೆ ಬಂದಂತೆ ಭಾಸ

ಕ್ಷಣಕಾಲ ನೋವಿಗೆ ವಿರಾಮ ಮನಕ್ಕೆ ಆರಾಮದ ಸಂತಸ


ಅವುಗಳೊಳಗಿನ ಪ್ರೀತಿಯ ಮಧುರವೇ ಚಂದ

ಅವುಗಳ ಸೌಂದರ್ಯವೇ ಎಷ್ಟೊಂದು ಅಂದ

ಬಾನಂಗಳದಲ್ಲಿ ಹಾರುವ ಹಕ್ಕಿಯ ಕಂಡೆನಾ ಇಲ್ಲಿ

ಸಂತಸಕ್ಕೆ ಪಾರವೇ ಇರಲಿಲ್ಲ ಇಲ್ಲಿ



Rate this content
Log in

Similar kannada poem from Children