ಅಮ್ಮ
ಅಮ್ಮ
ನೋವುಗಳೆಲ್ಲವನು ಅರೆ ಅರೆದು ಸಂತಸವಾಗಿಸಿ ಉಣಬಡಿಸಿದಳು ತಾಯಿ ಕಂದನಿಗೆ
ತನ್ನ ಸುಖ ತನ್ನ ಕನಸು ಸುಟ್ಟು ಅದನ್ನೇ ದೃಷ್ಟಿ ಬಟ್ಟಾಗಿಸಿದಳು ಮಡಿಲಿನ ಕೂಸಿಗೆ
ಮಯ್ಯ ಕರಗಿಸುವ ಅದೆಷ್ಟೋ ನೋವು, ಒಡಲ ಭಾದೆಯ ಅವಿತು ಅಲುಗದೆ ನಕ್ಕಳು
ಒಡಲ ಬಳ್ಳಿ ಬೆಳೆದಂದು ತನ್ನ ನೋವಿಗೆ ಅಂತ್ಯ
ಎಂಬ ಬರವಸೆಯಲಿ ಬೆಳೆಸಿದಳು ಮಕ್ಕಳ
ಎದೆಗೆ ತಾಕಿದ ಪುಟ್ಟ ಪಾದವ ಮುತ್ತಿಕ್ಕಿ ಮಮತೆಯಲಿ
ಮುದ್ದು ಮೊಗವನೇ ದಿಟ್ಟಿಸಿದಳು ಪ್ರೀತಿಯಲಿ
ಕಳೆದ ಕಾಲದ ಪರಿವೇ ಅರಿಯಲಿಲ್ಲ
ಬೆಳೆದು ನಿಂತ ಕೂಸ ಭುಜವ ದಾಟಿದಾಗ
ಚುಚ್ಚು ಮಾತು ಅದೆಲ್ಲಿಂದ ಬಂತು ಬರಲಿಲ್ಲ ನಂಬಿಕೆ
ಹೆತ್ತ ಮಗುವೇ ತೋರಲು ತೂರು ಬೆರಳು ಸಾವಿನೆಡೆ
ಭುವೆಯೇ ಬಾಯಿ ಬಿಟ್ಟ ಹಾಗೆ ಎದೆಯ ನೋವೇ
ಬದಲಾದ ಕಾಲದ ಪರಿಣಾಮವೇ ಹೀಗೆಯೇ
ಹೆತ್ತ ಒಡಲು ಬೇಕಿಲ್ಲ, ಮೋಜು ಮಸ್ತಿಯೇ ಬೇಕಾಯಿತಲ್ಲ,
ಸುಳ್ಳು ಮಾತು, ಮುಚ್ಚು ಮರೆ ಈಗಿನವರಿಗೇನು ಹೊಸದಲ್ಲ
ತಾಯಿಯ ಸಾವು ಸಹ ಹಿತವಾಯಿತಲ್ಲ
ಕಣ್ಣು ಮುಚ್ಚಿ ಕೂತ ಭಗವಂತನ ಏನೆಂದು ದೂರಲಿ
ಕಟ್ಟಿಕೊಂಡ ಹೆಣೆಬರಕ್ಕೆ ಎಷ್ಟೇಂದು ನೂಯಲಿ
ಅರ್ಥವಿರದ ಬದುಕಿಗೆ ಅಂತ್ಯವೆಂದೊ ಕಾಣೆ
ಮಮತೆ ಅನುಕಂಪ ಭ್ರಮೇಯು ನನ್ನಾಣೆ
