STORYMIRROR

Gireesh pm Giree

Children Stories Classics Inspirational

4  

Gireesh pm Giree

Children Stories Classics Inspirational

ಗೆಳೆಯ

ಗೆಳೆಯ

1 min
388

ಬಾರದ ಲೋಕಕ್ಕೆ ನಿನ್ನ ಪಯಣ

ಬಾ ಎಂದರು ಬಾರೇ ಈ ದಿನ

ನಗುವ ಹೊತ್ತು ತಂದೆ ನಮ್ಮ ಅಳಿಸಿ ನೀನು ಹೋದೆ

ಯುಗಪುರುಷನಂತೆ ಬಂದೆ ಜಗದ ನಿಯಮಕ್ಕೆ ತಲೆಬಾಗಿದೆ


ಸಾವೆಂಬ ಮಾಯೆಯ ಮಾಯೆ ತಿಳಿಯಲು ಸಾಧ್ಯವೇ?

ಬಾಳೆಂಬ ಪಯಣ ಇರುವುದು ಅಲ್ಪವೇ

ಹುಟ್ಟು ಸಾವಿನ ನಡುವೆ ಯಾಕೆ ಬೇಕು ಕೋಪ

 ನೊಂದವರ ಬಾಳಿಗೆ ಆಗೋಣ ನಂದಾದೀಪ



ಸಾವಿರಾರು ರೂಪಾಯಿ ಕೊಟ್ಟು ದಾನಿ ಎನಿಸಿಕೊಳ್ಳಬೇಡ

ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ಹಾಕಿ ನೋಡ

ಅದುವೇ ಸಾಕು ನಿನ್ನ ಜನುಮ ಹಸನಾಗಿಸಲು

ಜಗ ನಿನ್ನ ನೋಡಲು ನಿಜ ಮಾನವನ್ನು ತಿಳಿಯಲು


ಬರುವ ಹಾದಿಯಲ್ಲಿ ನೀನೇನು ತಂದೆ 

ಹೋಗುತ್ತ ನೀನೇನು ಕೊಂಡು ಹೋದೆ

ಹಣ ಅಂತಸ್ತು ಸಾವಿನ ದವಡೆಯಿಂದ ಪಾರು ಮಾಡಿತೇ?

ಅವನ ಕೂಡ ಸಾವು ಸುಮ್ಮನೆ ಬಿಟ್ಟಿತೇ?



ಸಂಪತ್ತಿನ ದಾಹಕ್ಕೆ ಬಿದ್ದು ಮೆರಿ ಮರಿ ಬೇಡ ಅನುಬಂಧ

ಕೊನೆಗೆ ನಿನ್ನ ಹೆಗಲ ಮೇಲೆ ಹೊತ್ತು ಹೋಗಲು ಬೇಡವೇ ಸಂಬಂಧ

ಹಣಗಳಿಸೋ ಜೊತೆಗೆ ಪ್ರೀತಿ ಗಳಿಸೋ

ಹಣವೇ ಮುಖ್ಯ ಎಂಬ ಭ್ರಮೆಯ ತಲೆಯಿಂದ ಅಳಿಸೋ ಓಡಿಸೋ.






Rate this content
Log in