STORYMIRROR

Sangeetha Ganesh

Comedy Inspirational Children

4  

Sangeetha Ganesh

Comedy Inspirational Children

ಮಳೆಯೊಂದಿಗಿನ ನೆನಪು

ಮಳೆಯೊಂದಿಗಿನ ನೆನಪು

1 min
6

ಮಳೆಯೊಂದಿಗಿನ ನೆನಪು

ನನ್ನ ಬಾಲ್ಯದ ನೆನಪು 

ತುಂತುರು ಮಳೆಯೊಂದಿಗಿನ ತುಂಟಾಟದ ನೆನಪು 

ಅಮ್ಮನಿಂದ ಬಯಿಸಿಕೊಂಡ ದಿನಗಳ ನೆನಪು

ಅಬ್ಬ….. ಅಬ್ಬಾ…

ಬೆಳಿಗ್ಗೆ ೮ ಗಂಟೆಗೆ ಕಾದಿರುವ ಮಳೆ 

ಮಳೆಯೊಂದಿಗೆ ಶಾಲೆಗೆ ಸಾಗುವ 

ನಮ್ಮ ಸ್ನೇಹಿತರ ಪಯಣ 

ಹಳ್ಳ ಕೊಳ್ಳಗಳ ಬಣ್ಣದಿಂದ ತುಂಬಿದ 

ಚಿತ್ತಾರದ ಸಮವಸ್ತ್ರ 

ಅಮ್ಮನಿಂದ ಹೊಡೆತ, 

ಹೊಡೆತವನ್ನು ಎದುರಿಸಲು ಇರುವ ಅಜ್ಜಿ 

ಅಯ್ಯೋ... ಅಯ್ಯೋ...

ಒಂದೇ ಕೊಡೆಯಲ್ಲಿ ಬರುವ ನಾವುಗಳು 

ಕೊಡೆ ಬ್ಯಾಗ್ ನಲ್ಲಿ ಇದ್ರೂ 

ಹೊರಗೆ ತೆಗೆಯಲು ಬಾರದ ಮನಸ್ಸು 

ಅರ್ಧಂಬರ್ಧ ಒದ್ದೆಯಾದ ಶಾಲೆಯ ಸಮವಸ್ತ್ರ 

ಮತ್ತೆ, ಅದೇ ಅಮ್ಮನ ಬೈಗುಳ 

ಅದೇ ಪ್ರೀತಿ, ಅದೇ ಮಮತೆ 

ಅಮ್ಮ, ಅಮ್ಮಾ...

ಮಳೆಗಾಲದ ತಿನಿಸು 

ನನಗೆಂದೆ ಮಾಡಿದ ಹಲಸಿನ ಕಡಬು 

ಅಮ್ಮನ ಪ್ರೀತಿಯ ರುಚಿ

ಆಹಾ, ಹಾ...

ಎಂಥ ನೆನಪು ! ಮತ್ತೆ ಬರಬಾರದೆ ಆ ಬಾಲ್ಯ..



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy