STORYMIRROR

Sangeetha Ganesh

Classics Inspirational

4  

Sangeetha Ganesh

Classics Inspirational

ಅದು... ಯಾವ ಶಕ್ತಿ !

ಅದು... ಯಾವ ಶಕ್ತಿ !

1 min
8

ಯಾರು ನೋಡದಿದ್ದರೇನು?

ಆ ದೇವ ನೋಡುವನು

ಎನುತ್ತಿದ್ದಳು ನನ್ನ ಅಮ್ಮ ಅಂದು 

ಇಂದು, ನನ್ನ ಮನಸ್ಸಿನಲ್ಲಿ ಎಂದೆಂದು


ಹೌದು ನನ್ನ ನೋಡುತ್ತಿಹುದು

ಕಾಡುತ್ತಿಹುದು 

ವಿಜ್ಞಾಪಿಸುತ್ತಿಹುದು 

ಆಜ್ಞಾಪಿಸುತ್ತಿಹುದು 

ಆ ಶಕ್ತಿ .. ಅಗೋಚರಶಕ್ತಿ


ನನ್ನ ಕೆಲಸ ಕಾರ್ಯಗಳಲ್ಲಿ ಮುಂದಾಗಿ ನಿಂತು

ನೀಡುತ್ತಿಹುದು ಮನ ಉಲ್ಲಾಸ 

ತಪ್ಪು ಹೆಜ್ಜೆಗೆ ಕಾಲಿಡದಂತೆ ಬೆಂಗಾವಲಾಗಿ 

ಕಾಯುತ್ತಿಹುದು


ನನ್ನಲ್ಲಿರುವ ಧೈರ್ಯಕ್ಕೆ ಧೈರ್ಯವಾಗಿ 

ಮನಸ್ಸು ಬುದ್ಧಿಗೆ ಅಪತ್ರಾಂಧವನಾಗಿ 

ಆದುದೆಲ್ಲಾ ಒಳ್ಳೆಯದಕ್ಕೆ ಎನ್ನುವ ಆತ್ಮಸ್ಥೆರ್ಯನಾಗಿ 

ಗುರುವಾಗಿ, ತಾಯಿಯಾಗಿ, ತಂದೆಯಾಗಿ, ಸ್ನೇಹಿತನಾಗಿ 

ಪ್ರೇರಿಪಿಸುತ್ತಿಹುದು ಆ ಶಕ್ತಿ


ಯಾರಿರಬಹುದು?

ಹೌದೌದು... ನನ್ನ ಅಮ್ಮ ನೆಂದ ಮಾತು ಸತ್ಯ 

ಯಾರು ನೋಡದಿದ್ದರೇನು

ಆ ದೇವ ನೋಡುವನು !



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics