ನಮ್ಮೂರು
ನಮ್ಮೂರು
ನಮ್ಮೂರ ಕೃಷ್ಣನ ನೋಡ ಬನ್ನಿ
ಬೆಣ್ಣೆ ತುಪ್ಪ ಸ್ವಲ್ಪ ತನ್ನಿ
ಪ್ರೀತಿ, ವಾತ್ಸಲ್ಯ, ಮಮತೆ ತುಂಬಿದ ಬೆಣ್ಣೆ
ಅದರಿಂದ ಜನ್ಮ ತಾಳಿದ ಭಕ್ತಿ ವೆಂಬ ತುಪ್ಪ
ಕೃಷ್ಣಾ ಕೃಷ್ಣಾ ಎಂದಾಗ ಬರುವನು ನಮ್ಮ ಕೃಷ್ಣ
ಮಧ್ವರಿಗೆ ದೊರೆತ ಕಡಗೋಲು ಕೃಷ್ಣ
ಕನಕದಾಸರಿಗೆ ಒಲಿದ ಕೃಷ್ಣ
ನಮ್ಮ ನಿಮ್ಮೆಲ್ಲರ ಭಕ್ತಿ ಗೊಲಿವ ದೇವ ಕೃಷ್ಣ
ಊರೂರು ತಿರುಗಿ ನಮ್ಮೂರ ನೋಡ ಬನ್ನಿ
ಕಡಲ ತೀರದ ಭಾರ್ಗವರ ತವರೂರ ನೋಡ ಬನ್ನಿ
ನಂದಳಿಕೆ ಮುದಣ್ಣರ ಹುಟ್ಟೂರು ನಮ್ಮದು
ಕಲೆ ಸಾಹಿತ್ಯ ಯಕ್ಷಗಾನದ ಸಿಹಿ ಉಣ್ಣಬಳಿಸುವ
ಕೃಷ್ಣನೂರು
ಪ್ರಕೃತಿಯ ಸೌಂದರ್ಯ
ಶಿಕ್ಷಣದ ಮಹತ್ವ
ಅಡುಗೆಯ ರುಚಿ
ಎಲ್ಲದರಲ್ಲೂ ಸೈ ಎಂದೆನಿಸಿದ ಊರು ನಮ್ಮೂರು
ಬನ್ನಿ ಬನ್ನಿ ನೋಡ ಬನ್ನಿ ನಮ್ಮೂರ
