STORYMIRROR

Sangeetha Ganesh

Classics Inspirational

4  

Sangeetha Ganesh

Classics Inspirational

ಬದುಕು ಸುಂದರ

ಬದುಕು ಸುಂದರ

1 min
10

ಜೀವ ರಾಶಿ ಗಳಲ್ಲಿ ಮನುಷ್ಯನೇ

ಶ್ರೇಷ್ಠ ರೆಂದರು ದಾಸರು, ವಿಜ್ಞಾನಿಗಳು, ಬಲ್ಲವರು

ಆದರು ನಾವೆನ್ನುವುದುಂಟು

ಮನುಷ್ಯ ಜನ್ಮವೇ ಸಾಕೆಂದು


ನರರು ನಾವು ಈ ಪ್ರಕೃತಿಯ ಮಡಿಲಲ್ಲಿ ಹುಟ್ಟಿರುವ 

ಕೂಸುಗಳು ಪ್ರಕೃತಿಯಲ್ಲಿ ಏರುಪೇರುಗಳಿರುವಾಗ ನಮ್ಮ 

ನಿಮ್ಮ ಜೀವನದಲ್ಲಿರುವ ಏರುಪೇರುಗಳೇನು ಮಾಹ?

ಪ್ರಕೃತಿಯೇ ಆದರ್ಶ ನಮಗೆ, ನಿಮಗೆ 

ಒಮ್ಮೆ ಕಡಿದ ರೆಂಬೆ ಮತ್ತೆ ಚಿಗುರುದಿಲ್ಲವೇ?

ಗಿಡದಲ್ಲಿ ಒಂದು ಹೂ ಹುಟ್ಟಿ ಬಾಡಿತೆಂದು 

ಇನ್ನೊಂದು ಹೂ ಹುಟ್ಟುವುದು ನಿಂತಿತೇ?

ದಿನಾ ಪಶ್ಚಿಮದಲ್ಲಿ ಮುಳುಗುವ ಸೂರ್ಯ 

ತಾನೇಕೆ ಹುಟ್ಟಲಿ ಎಂದು ಪೂರ್ವದಲ್ಲಿ ಉದಯಿಸುದು ಬಿಟ್ಟನೇ?

ಇದೆಲ್ಲಾ ತಿಳಿದಿದೆ ನಮಗೆ


ಮನುಜ ಜನ್ಮ ದೊಡ್ಡದು ಅದ ಹಾಳು ಮಾಡ ಬೇಡಿ ಹುಚ್ಚಪ್ಪಗಳ್ಳಿರಾ..

ಎಂದ ದಾಸರ ಹಾಡು ಎಂಬ ಸಿನಿಮಾ ಹಾಡು

ಅರಳುವ ಹೂವುಗಳೇ ಕೇಳಿರಿ ಬಾಳೊಂದು ಹೋರಾಟ ಮರೆಯದಿರಿ...

ಅದು ಸಾಲದಕ್ಕೆ ಏನಾಗಲಿ ಮುಂದೆ ಸಾಗು ನೀ....

ಇದೆಲ್ಲಾ ಹಾಡು ಕೇಳಿಲ್ವ ನಾವು ?

ನಮಗೇನು ಕಮ್ಮಿ ಇದೆ 


ಕಣ್ಣಿಗೆ ಕಟ್ಟುವಷ್ಟು ಪ್ರಕೃತಿ ಸೌಂದರ್ಯ

ಕಿವಿಗೆ ಕೇಳುವಷ್ಟು ಪಕ್ಷಿಗಳ ಇಂಚರ 

ನಮ್ಮ ಮಾತಿಗೆ ಬೆಲೆ ಕೊಡದ 

ಮನುಷ್ಯರಿರಬಹುದು ಪ್ರಾಣಿಗಳಿಲ್ಲವೆ, 

ನಮಗಾಗಿ ನಮ್ಮ ಕಷ್ಟ ದುಃಖದ ಜೊತೆಯಾಗಿ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics