STORYMIRROR

Surabhi Latha

Abstract Romance Others

4  

Surabhi Latha

Abstract Romance Others

ಮಿಲನ

ಮಿಲನ

1 min
351

ಅಂತರ ವಿರಲಿ ನಮ್ಮಿಬ್ಬರಲಿ ಗೆಳೆಯ 

ನೋವು ಕೊಡುವುದು ಕೆಲವು ಸಮಯ 

ಸಲಿಗೆಯು ಸಂತಸ ಸುಲಿಗೆ ಯಾತು 

ಮಾತು ಮನವ ಮಲಿನ ಮಾಡಿಯಾತು 


ಅರಿತು ನಡೆದರೂ ಆತಂಕ ತಪ್ಪಿಲ್ಲ 

ನುಡಿದ ನುಡಿಯಲಿ ತಪ್ಪು ಕಂಡಿಲ್ಲ 

ಸರಸದ ಸಮಯಕೆ ಅಂತ್ಯ ವೇನಿಲ್ಲ 

ಇರಲಿ ಈ ಬಂಧ, ಚಿಂತೆ ಬೇಕಿಲ್ಲ 


ಮೈದು ಮನಗಳಿಗೆ ಕಿಚ್ಚು ಹತ್ತೀತು 

ದೃಷ್ಟಿ ದೋಷವು ನಮ್ಮ ಹಿಡಿದೀತು 

ದೇಹವೆರಡು ಇರಲೇನು ದೂರದಲಿ 

ನಂಬಿಕೆಯಲಿ ಹುಳುಕು ಕಾಣದಿರಲಿ 


ಬರೆದ ಬರಹಗಳ ಮಿಲನವಾಗಲು

ಹೃದಯದಲಿ ಸಂತಸ ಹೊಮ್ಮಲಿ 

ಕಣ್ಣ ಕಾಂತಿಯಲಿ ವಿಷಾದ ಬೇಡ 

ಕಣ್ಣ ರೆಪ್ಪೆ ನಾನಾಗುವೆ ನೀ ನೋಡ 


ಅಂತರ ವಿರಲಿ ನಮ್ಮಿಬ್ಬರಲಿ ಗೆಳೆಯ 

ನೋವು ಕೊಡುವುದು ಕೆಲವು ಸಮಯ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract