ಮಹಾಲಕ್ಷ್ಮೀ
ಮಹಾಲಕ್ಷ್ಮೀ
**ಮಹಾಲಕ್ಷ್ಮೀ ಮನೆಗೆ ಬಾರಮ್ಮ
ಮಹಾಲಕ್ಷ್ಮೀ ಮನೆಗೆ ಬಾರಮ್ಮ
ಸುಖ ಸಂತಸವ ತಾರಮ್ಮ !
ಶ್ರಾವಣ ಮಾಸದ ಎರಡನೇ ಶುಕ್ರವಾರ
ನಿನಗೆ ಪ್ರಿಯವಂತೆ
ಬ್ರಾಹ್ಮಿ ಮುಹೂರ್ತದ ಪೂಜೆಗೆ ನೀ
ಒಲಿಯುವೆಯಂತೆ
ಕರುಣಿಸು ತಾಯಿ ಮಂಗಳವನ್ನು
ಹರಿಸಿ ಬದುಕಿಗೆ ಸಂತಸವನ್ನು !೧!
ಕ್ಷೀರ ಸಾಗರದಿ ತಾಯೇ ಅವತರಿಸಿದೆ
ಒಡವೆ ವಸ್ತ್ರಗಳಿಂದ ಅಲಂಕರಿಸಿ
ನಿನ್ನ ರೂಪವ ಕಣ್ತುಂಬಿಕೊಳ್ಳುವೆ
ತಳಿರು ತೋರಣಗಳಿಂದ ಬಾಗಿಲ ಸಿಂಗರಿಸಿ
ಸ್ವಾಗತಿಸುತಿರುವೆ ತಾಯಿ ಭಕ್ತಿಯಿಂದ
ಬದುಕು ಬೆಳಗಿಸು ತಾಯಿ ದೀಪದಂತೆ ಪ್ರಜ್ವಲಿಸುವಂತೆ !೨!
ಪುಷ್ಪ ಪ್ರಿಯೆ ಮಾತೆ ಸಾಷ್ಟಾಂಗ ವಂದನೆ
ಕಮಲದ ಹೂವುಗಳ ನಿನಗರ್ಪಿಸುವೆ
ಬಿಲ್ವ ಪತ್ರೆಯ ಎಲೆಗಳ ಮಾಲೆಯ ಮಾಡಿ ಆರಾಧಿಸುವೆ
ವೀಳ್ಯದೆಲೆಗಳು ನಿನಗೆ ಶ್ರೇಷ್ಠವೇ
ಕಳಶದಲ್ಲೇ ಕಂಡೆ ನಿನ್ನ ರೂಪವನ್ನೇ ! ೩!
ಶ್ರದ್ಧೆ ಭಕ್ತಿಗೊಲಿಯುವ ಮಹಾಮಾತೆ
ದಾರಿದ್ರ್ಯ ಕಳೆವ ಭಾಗ್ಯದಾತೆ
ಒಡವೆ ವಸ್ತ್ರಗಳ ಬಯಕೆ ಎನಗಿಲ್ಲ
ನಿನ್ನ ಅನುಗ್ರಹವೊಂದು ಸಾಕು ಸಹಿಸಬಲ್ಲೇ ದುಃಖ ದುಮ್ಮಾನಗಳ
ಸಂತಾನ, ಆರೋಗ್ಯ ಸುಖ ನೆಮ್ಮದಿಯ ನೀಡಮ್ಮ
ಮಹಾಲಕ್ಷ್ಮೀ ನಿನ್ನ ಕಂದನ ಹರಸಮ್ಮ
ಮಹಾಲಕ್ಷ್ಮೀ ಮನೆಗೆ ಬಾರಮ್ಮ
ನಿನ್ನ ಭಕ್ತರ ಪ್ರಾರ್ಥನೆಯ ಸ್ವೀಕರಿಸಮ್ಮ !೪!
