STORYMIRROR

Gireesh pm Giree

Inspirational

2  

Gireesh pm Giree

Inspirational

ಮೌನರಾಗ

ಮೌನರಾಗ

1 min
147

ಮೌನವೇ ದೇವರು ಅಂದರು ಹಿಂದಿನವರು

ಸುಮ್ಮನೆ ಇದ್ದರೂ ಬಿಡುವವರಾ ಇಂದಿನವರು?

ಒಳಿತು ಮಾಡುವ ಮನುಜರು ಇದ್ದರು ಕೆಲವರು

ನಾಲ್ಕು ದಿನ ಜೀವನ ಆದರೂ ಹೋದರು


ಯಾರ ನಂಬಲಿ ನಾನು ನಾನಂತೂ ತಿಳಿಯೆ

ವಂಚನೆ ಜಾಲಕ್ಕೆ ಸಿಲುಕಿಸುವರು ಇರುವರು ಬಳಿಯೇ

ಬಾಳಲ್ಲಿ ಎಚ್ಚರ ತಪ್ಪಿದರೆ ಹಾಳಾಗುವುದು ಬಾಳು

ಮಾಡುವರು ನಮ್ಮ ತಲೆ ಬೋಳು ಹೇ ಗೆಳೆಯ, ಹೇಳುದ ಕೇಳು


ಬಣ್ಣಬಣ್ಣದ ಜಗದಲ್ಲಿ ಮುಖವಾಡ ಹಾಕಿದವರರೆಷ್ಟೂ

ಅವರ ಮರುಳ ಮಾತಿಗೆ ಮರುಳಾದ ಜನರೆಷ್ಟೋ

ರಂಗಿನ ದುನಿಯಾದಲ್ಲಿ ಕುಣಿಸುವರು ಮೋಸದ ತಾಳಕ್ಕೆ

ಅವರ ಕೈಗೊಂಬೆ ನೋವಾದರೆ ನಾವೇ ಪಾತ್ರಧಾರಿ ಅವರ ಮೇಳಕ್ಕೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational