ಲೋಹದ ಹಕ್ಕಿ
ಲೋಹದ ಹಕ್ಕಿ
ನಭದಲ್ಲಿ ಹಾರಾಡುವ ಲೋಹದ ಹಕ್ಕಿ
ಬಾನಂಗಳದಲ್ಲಿದ್ದು ದೇಶ ಕಾಯುವ ಅಸಮಾನ್ಯ ಹಕ್ಕಿ
ಶಬ್ದಕ್ಕಿಂತ ವೇಗವಾಗಿ ಚಲಿಸುವ ಶಕ್ತಿ
ಎದುರಾಳಿಯ ಹೊಡೆದುರುಳಿಸುವ ಸಮರ್ಥ ಯುಕ್ತಿ
ಆಗಸದಲ್ಲಿ ಮಿಂಚಿನ ಸಂಚಲನ ಮೂಡಿಸಿ
ಶತ್ರುಗಳ ಎದೆ ನಡುಕ ಹುಟ್ಟುವಂತೆ ಮಾಡಿಸಿ
ಈ ದೇಶದ ಕೀರ್ತಿಪತಾಕೆ ಬಾನೆತ್ತರಕ್ಕೆ ಹಾರಿಸಿ
ಎದುರಾಳಿಯ ದಾಳಿಯ ಸಮರ್ಥವಾಗಿ ಮಣಿಸಿ
ಆಗಸದಲ್ಲಿ ಮಿಂಚಿನ ವೇಗದ ದಾಳಿಗೆ ಹೆದರದು
ದುಷ್ಟರ ಎದೆ ಸೀಳಲು ಅಂಜದು
ನಮ್ಮಯ ಪಾಲಿನ ಆಪತ್ಕಾಲದ ಬಂಧು
ನಿಮ್ಮ ಜೊತೆ ನಾವು ಎಂದೆಂದು
