ಕುದುರೆ ಸವಾರಿ
ಕುದುರೆ ಸವಾರಿ
ಎರಡು ಕುದುರೆಗಳನು
ಏಕಕಾಲದಲ್ಲಿ ಮೇಲೆ
ಏರುವ ಹರಸಾಹಸ
ಎರಡು ಕುದುರೆಗಳ
ಲಗಾಮು ಹಿಡಿಯುತ
ಮೇಲೇರುವ ಹೆಬ್ಬಯಕೆ
ಎರಡು ಕುದುರೆಗಳ
ಮೇಲೆ ಕಾಲಿಡುತ
ಆಕಾಶದಲ್ಲಿ ಜಿಗಿಯುವ
ಹುಚ್ಚು ಕೋಡಿ ಮನಸ್ಸು
ಕಡಿವಾಣವಿಲ್ಲದ
ನಾಗಾಲೋಟದಲಿ
ಸಾಗುವ ಕುದುರೆ ಸವಾರಿ
