ಕತ್ತಲೆ ಭಯ
ಕತ್ತಲೆ ಭಯ
ಆವರಿಸಿದೆ ಜಗದೆಲ್ಲೆಡೆ ನಶೆಯ ಛಾಯೆ
ಅವತರಿಸಿದೆ ಜಗದೆಲ್ಲೆಡೆ ಮಾದಕದ ಮಾಯೆ
ವಯಸ್ಸಲ್ಲದ ವಯಸ್ಸಲ್ಲಿ ಆಕರ್ಷಣೆ ಸಹಜ
ಆದರೂ ನೀ ಆಕರ್ಷಣೆಗೆ ಬಲಿಯಾಗದಿರು ಮನುಜ
ಬದುಕೇ ಸುಂದರ ಸುಮಧುರ ಸಂಚಾರ
ಸಂಚಾರಕ್ಕೆ ಕೆಟ್ಟ ಆಲೋಚನೆಯೇ ತರುವುದು ಸಂಚಕಾರ
ಅರೆ ಕ್ಷಣದ ಮೋಜಿಗಾಗಿ ಜೀವನವೇ ಬಲಿ
ಕೆಲವು ನಿಮಿಷಗಳ ಮಸ್ತಿಗಾಗಿ ಬದುಕೇ ಗಲಿಬಿಲಿ
ಸಾಲ ಮಾಡಿಯಾದರೂ ಅಮಲು ಮಾಡುವುದು ಕಮಾಲು
ಹೆಂಡತಿ ಮಕ್ಕಳು ಹಸಿವಿನಿಂದ ಬೀದಿಪಾಲು
ಶುರುವಾಗುವುದು ಮನೆಯಲ್ಲಿ ಹೊಸ ಗೋಳು
ಜೀವನದ ಆಸೆಗಳೇ ಪಾತಾಳಕ್ಕೆ ಬೀಳು ಕನಸುಗಳು ಸೀಳು ಸೀಳು
